1235 ಮಂದಿಗೆ ಕೊರೊನಾ: 5 ಸಾವು

694

Get real time updates directly on you device, subscribe now.

ತುಮಕೂರು: ಸೋಮವಾರದಂದು 1,235 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 508 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 39,709 ಏರಿಕೆ ಕಂಡಿದೆ. 9,767 ಸಕ್ರಿಯ ಪ್ರಕರಣಗಳ ಪೈಕಿ 457 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 508, ಚಿನಾಹಳ್ಳಿ 13, ಗುಬ್ಬಿ 265, ಕೊರಟಗೆರೆ 52, ಕುಣಿಗಲ್ 39, ಮಧುಗಿರಿ 68, ಪಾವಗಡ 81, ಶಿರಾ 29, ತಿಪಟೂರು 124, ತುರುವೇಕೆರೆಯಲ್ಲಿ 56 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಕೋವಿಡ್ ನಿಂದ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ವ್ಯಕ್ತಿ (62), ಚಿಕ್ಕನಾಯಕನಹಳ್ಳಿ ನಗರದ ವ್ಯಕ್ತಿ (37) ಹಾಗೂ ಅನ್ಯಕಾರಣದಿಂದ ತುಮಕೂರು ನಗರದ ಗೋಕುಲ ಬಡವಣೆಯ ವ್ಯಕ್ತಿ (66), ಬಟವಾಡಿಯ ವ್ಯಕ್ತಿ (63), ರಾಘವೇಂದ್ರ ನಗರದ ವ್ಯಕ್ತಿ (72) ಮೃತರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!