ಕೋವಿಡ್ ಟೆಸ್ಟ್ ಗೆ ಜನಸಾಗರ

240

Get real time updates directly on you device, subscribe now.

ಕುಣಿಗಲ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆಗೆ ಜನರು ಸಾಲುಗಟ್ಟಿ ನಿಂತಿದ್ದು ಇರುವ ವೈದ್ಯಕೀಯ ಸಿಬ್ಬಂದಿ ತಪಾಸಣೆ ಮಾಡಲು ಪರದಾಡುವ ಸ್ಥಿತಿ ಉಂಟಾಗಿದೆ.
ದಿನೇ ದಿನೆ ಜ್ವರ, ಮೈಕೈ ನೋವು, ಇನ್ನು ಕೆಲವರಿಗೆ ಯಾವುದೇ ಲಕ್ಷಣಗಳಿಲ್ಲದೆ ಬರಿ ಸುಸ್ತು ಕಾಣಿಸಿಕೊಳ್ಳುತ್ತಿದ್ದು, ಇವರ ಎಕ್ಸರೆ ಮಾಡಿ ಸಿಟಿ ಸ್ಕ್ಯಾನ್ ಮಾಡಿದಾಗ ಸೋಂಕು ತೀವ್ರಗತಿಯಲ್ಲಿರುವುದು ಪತ್ತೆಯಾಗುತ್ತಿದೆ, ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೊವಿಡ್ ಕರ್ತವ್ಯದ ವೈದ್ಯರು ತಪಾಸಣೆ ಮಾಡಿದರೂ ಹೆಚ್ಚಿನ ಮಂದಿ ಬರುತ್ತಿರುವ ಕಾರಣ ಕರ್ತವ್ಯದಲ್ಲಿರುವ ವೈದ್ಯರು ವೈದ್ಯಕೀಯ ಸಿಬ್ಬಂದಿ ಹೈರಾಣಾಗುವಂತಾಗಿದೆ. ಈ ಮಧ್ಯೆ ಆಸ್ಪತ್ರೆಯ ಲ್ಯಾಬ್, ಎಕ್ಸರೆ ವಿಭಾಗದ ಸಿಬ್ಬಂದಿಗೂ ಸೋಂಕು ತಗುಲಿದ್ದು ತಂತ್ರಜ್ಞರಿಲ್ಲದೆ ವೈದ್ಯರು ಪರದಾಡುತ್ತಿದ್ದಾರೆ.
ಇನ್ನು ಎಕ್ಸರೆ ಪರೀಕ್ಷೆಯಲ್ಲಿ ಸೋಂಕು ಸ್ವಲ್ಪ ಪ್ರಮಾಣದಲ್ಲಿ ಪತ್ತೆಯಾದರೆ ಹೆಚ್ಚಿನ ವರದಿಗೆ ಸಿಟಿ ಸ್ಕ್ಯಾನ್ ಅಗತ್ಯವಾಗಿದೆ.
ಆದರೆ ಸಿಟಿ ಸ್ಕ್ಯಾನ್ ದುಬಾರಿಯಾಗಿದ್ದು ಮಧ್ಯಮ ವರ್ಗ ಸೇರಿದಂತೆ ಬಡ ಕುಟುಂಬ ಪರದಾಡುತ್ತಿವೆ, ಜಿಲ್ಲಾಸ್ಪತ್ರೆಯಲ್ಲಿ ಉಚಿತವಾದರೂ ವರದಿ ಬರಲು ತುಂಬ ತಡವಾಗುತ್ತಿರುವ ಕಾರಣ ಜನ ಸಾಲಸೋಲ ಮಾಡಿ ಖಾಸಗಿಯವರ ಮೊರೆ ಹೋಗುವ ಸ್ಥಿತಿ ಇದೆ, ಸೋಮವಾರ ರ್ಯಾಪಿಡ್ ಟೆಸ್ಟ್ ಮತ್ತು ಗಂಟಲು ದ್ರವ ಪರೀಕ್ಷೆಯ ಮಾನದಂಡ ಬದಲಾಯಿಸಿದ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ಸೋಂಕು ತಪಾಸಣೆಗೆ ಬಂದವರು ಪರದಾಡಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದರು.
ಈ ಮೊದಲು ಸೋಂಕು ತಪಾಸಣೆಗೆ ವೈದ್ಯಕೀಯ ಸಿಬ್ಬಂದಿ ಜನರ ಮನೆ ಬಾಗಲಿಗೆ ಹೋದರೂ ತಪಾಸಣೆಗೆ ಸಹಕರಿಸದ ಜನ ಇದೀಗ ಸೋಂಕು ತೀವ್ರಗತಿಯಲ್ಲಿರುವ ಕಾರಣ ಸ್ವಲ್ಪ ಲಕ್ಷಣ ಕಂಡುಬಂದರೂ ತಪಾಸಣೆಗೆ ಆಸ್ಪತ್ರೆಗೆ ಆಗಮಿಸಿ ಸಿಬ್ಬಂದಿಯೊಂದಿಗೆ ಜಟಾಪಟಿಗೆ ಇಳಿದು ಪ್ರಭಾವಿಗಳಿಂದ ಕರೆ ಮಾಡಿಸಿ ವೈದ್ಯರ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ.
ಆಸ್ಪತ್ರೆ ವೈದ್ಯಾಧಿಕಾರಿ ಗಣೇಶ್ಬಾಬು ಮಾತನಾಡಿ, ಈ ಹಿಂದೆ ಲಕ್ಷಣಗಳಿದ್ದವರು ಬಂದಲ್ಲಿ ರ್ಯಾಪಿಡ್ ಮಾಡಿ ವರದಿ ಬಂದ ನಂತರ ಚಿಕಿತ್ಸೆ ಮಾಡಲಾಗುತ್ತಿತ್ತು, ಈಗಿನ ಮಾನದಂಡದ ಪ್ರಕಾರ 40 ರ್ಯಾಪಿಡ್ ಟೆಸ್ಟ್, 350 ಗಂಟಲು ದ್ರವ ತಪಾಸಣೆ ಕಿಟ್ ನೀಡಿದ್ದಾರೆ, ವೈದ್ಯರು ತಪಾಸಣೆ ಮಾಡಿ ಅಗತ್ಯವಿದ್ದರೆ ಮಾತ್ರ ಕಿಟ್ ಬಳಸಬೇಕಿದೆ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!