ಲಾರಿ ಚಾಲಕ ಈಗ ಹಾಲು ಉತ್ಪಾದಕ- ಲಾಕ್ ಡೌನ್ ಗೆ ಹೆದರದ ಯುವಕ

ಕಳೆದ ವರ್ಷ ಬದುಕು ಕಟ್ಟಿಕೊಂಡ ಗೌತಮ್

396

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಆಲ್ ಇಂಡಿಯಾ ಗೂಡ್ಸ್ ಲಾರಿ ಚಾಲಕನಾಗಿ ರಾಜ್ಯಗಳನ್ನು ಸುತ್ತುತ್ತಿದ್ದ ಗೌತಮ್ ಈಗ ತಮ್ಮ ತೋಟದಲ್ಲಿ 8 ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡುತ್ತಿದ್ದಾರೆ, ಡೈವಿಂಗ್ಗೆ ಬ್ರೇಕ್ ಹಾಕಿ ಪ್ರತಿನಿತ್ಯ 100 ಕ್ಕೂ ಅಧಿಕ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು, ಸಾವಿರಾರು ರೂ. ಸಂಪಾದನೆ ಮಾಡುತ್ತಿದ್ದಾರೆ.
2015 ರಲ್ಲಿ ಹೈನುಗಾರಿಕೆ ಮಾಡಿಕೊಂಡು ಸುಖ ಜೀವನ ನಡೆಸುತ್ತಿದ್ದ ಚಿಕ್ಕನಾಯಕನಹಳ್ಳಿ ಪಟ್ಟಣದ ಗೌತಮ್, ತಾಲೂಕಿನಲ್ಲಿ ಭೀಕರ ಬರಗಾಲದಿಂದ ತೋಟದಲ್ಲಿ ಇದ್ದ ಬೋರ್ವೆಲ್ಗಳು ನೀರಿಲ್ಲದೆ ಬತ್ತಿ ಹೋದವು, ಹೈನುಗಾರಿಕೆಯಲ್ಲಿ ದುಡಿದ ಹಣ ಕೊಳವೆ ಬಾವಿ ಕೊರೆಯಲು ವಿನಿಯೋಗಿಸಿ ಕೈಸುಟ್ಟುಕೊಂಡು, ಬೆಂಗಳೂರಿನಲ್ಲಿ ಟಿಟಿ ಚಾಲಕನಾಗಿ, ನಂತರ 2018 ರಲ್ಲಿ ಆಲ್ ಇಂಡಿಯಾ ಗೂಡ್ಸ್ ಲಾರಿ ಚಾಲಕನಾಗಿ ಪ್ರತಿ ತಿಂಗಳು 30 ಸಾವಿರ ಸಂಬಳ ಪಡೆಯುತ್ತಿದ್ದರು, ಖರ್ಚು ಕಳೆದು ಕನಿಷ್ಠ 15 ರಿಂದ 18 ಸಾವಿರ ಹಣ ಉಳಿತಾಯ ಮಾಡುತ್ತಿದ್ದರು. ಆದರು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ, ಕಳೆದ ವರ್ಷ 2020ರಲ್ಲಿ ಲಾಕ್ ಡೌನ್ನಿಂದ ಲಾರಿಗಳು ಲಾಕ್ ಆದವು, ಅನಿವಾರ್ಯವಾಗಿ ಊರಿಗೆ ಬರಬೇಕಾದ ಪರಿಸ್ಥಿತಿ ಉಂಟಾಯಿತು.
ಚಿಕ್ಕನಾಯಕನಹಳ್ಳಿಗೆ ಬಂದ ಗೌತಮ್ ತನ್ನ 8 ಎಕರೆ ತೋಟದಲ್ಲಿ ಏನಾದರು ಮಾಡಬೇಕು, ನಮ್ಮ ಊರಿನಲ್ಲಿಯೇ ದುಡಿಯಬೇಕು ಎಂಬ ಛಲಕ್ಕೆ ನಿಂತ, ಹೈನುಗಾರಿಕೆಯಲ್ಲಿ ಅನುಭವವಿದ್ದ ಕಾರಣ ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯೂ ಆಗಿದ್ದರಿಂದ ತೋಟದ ಬೋರ್ವೇಲ್ನಲ್ಲಿ ನೀರು ಬರುತ್ತಿತ್ತು, ಇದನ್ನು ಸದುಪಯೋಗ ಪಡಿಸಿಕೊಂಡ ಗೌತಮ್ ತನ್ನ ತಂದೆಯ ಸಹಕಾರದಿಂದ 8 ಹಸು ಖರೀದಿ ಮಾಡಿ ಹೈನುಗಾರಿಕೆ ಪ್ರಾರಂಭ ಮಾಡಿದ್ದಾರೆ.
ಎಂಟು ಹಸುಗಳ ಪೈಕಿ ಆರು 6 ಹಸು ಹಾಲು ನೀಡುತ್ತಿದ್ದು, ಇವುಗಳಲ್ಲಿ ಒಂದು ದಿನಕ್ಕೆ 100 ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ, ಇದರಿಂದ ಪ್ರತಿ ನಿತ್ಯ 2500 ಹಣ ಸಿಗುತ್ತಿದೆ, ಹಸುಗಳ ಖರ್ಚು ವೆಚ್ಚ ಕಳೆದು ತಿಂಗಳಿಗೆ 40 ರಿಂದ 45 ಸಾವಿರ ಹಣ ಉಳಿಯುತ್ತಿದೆ, ಕೆಲವೇ ದಿನಗಳಲ್ಲಿ ಇನ್ನೂ ಮೂರು ಹಸುಗಳು ಕರು ಹಾಕಲಿದ್ದು ಒಟ್ಟು ಸೇರಿ ಪ್ರತಿ ದಿನ 140 ಲೀಟರ್ ಹಾಲು ಸಿಗುತ್ತದೆ, ಇವುಗಳಿಂದ ತಿಂಗಳಿಗೆ 50 ಸಾವಿರ ಹಣ ಉಳಿಸಬಹುದು, ಲಾರಿ ಡೈವಿಂಗ್ನ ಭಯದ ಬುದುಕು ಸಾಕಾಗಿ ಹೋಗಿತ್ತು, ಕಳೆದ ವರ್ಷ ಕೊರೊನಾ ಲಾಕ್ ಡೌನ್ನಿಂದ ಹೊಸ ದಾರಿ ಸಿಕ್ಕಿತ್ತು, ಇಂದು ಸ್ವಂತ ದುಡಿಮೆಯಿಂದ ತಂದೆ ತಾಯಿ ಅಕ್ಕ ಹಾಗೂ ಸ್ನೇಹಿತರ ಜೊತೆ ಖುಷಿಯಾಗಿದ್ದೇನೆ ಎನ್ನುತ್ತಾರೆ ಗೌತಮ್.

Get real time updates directly on you device, subscribe now.

Comments are closed.

error: Content is protected !!