ಗುಬ್ಬಿ: ಕಲ್ಪತರು ನಾಡಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು ಪ್ರತಿದಿನ ಸಾವಿರಕ್ಕೂ ಹೆಚ್ಚು ಕೇಸ್ ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿ ತಾಲ್ಲೂಕುಗಳಲ್ಲೂ ಕೋವಿಡ್ ಕೇರ್ ಸೆಂಟರ್‌ಗಳನ್ನು ಮಾಡುವ ಮೂಲಕ ಕೊರೊನಾ ಕಟ್ಟಿಹಾಕಲು ಸರಕಾರ ಬಹಳಷ್ಟು ಪ್ರಯತ್ನ ಮಾಡುತ್ತಿದೆ.
ಮೊದಮೊದಲು ಕೇವಲ ಪಟ್ಟಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಸೋಂಕಿತರು ಈಗ ಪ್ರತಿ ಹಳ್ಳಿಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಇನ್ನೂ ಕೆಲವು ಸೋಂಕಿತರು ವಿಳಾಸ ಮತ್ತು ಮೊಬೈಲ್ ನಂಬರನ್ನು ಸರಿಯಾಗಿ ನೀಡದೆ ಇರುವುದು ಕೂಡ ಒಂದು ದೊಡ್ಡ ಆತಂಕವಾಗಿದ್ದು ಇವರು ಸಾರ್ವಜನಿಕವಾಗಿ ಓಡಾಡುತ್ತಿರುವುದರಿಂದ ಕೊರೊನಾ ಹೆಚ್ಚುವ ಸಂಭವ ಹೆಚ್ಚಾಗುತ್ತಿದೆ, ಹಾಗಾಗಿ ಅವರನ್ನು ಮೊದಲು ಕೋವಿಡ್ ಸೆಂಟರ್‌ಗೆ ಸ್ಥಳಾಂತರಿಸಬೇಕಾಗಿದೆ, ನಗರ ಮಾತ್ರವಲ್ಲದೆ ಪ್ರತಿ ತಾಲ್ಲೂಕುಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆಯಿಂದಾಗಿ ಪ್ರತಿ ತಾಲ್ಲೂಕಿನಲ್ಲಿಯೂ ಸರಕಾರವೇ 100 ರಿಂದ 150 ಹಾಸಿಗೆವುಳ್ಳ ಕೋವಿಡ್ ಕೇರ್ ಸೆಂಟರ್‌ಗಳನ್ನು ಮಾಡಿ ಅಲ್ಲಿ ಸೋಂಕಿತರು ಉಳಿದುಕೊಳ್ಳಲು ಹಾಗೂ ಅವರಿಗೆ ಬೇಕಾದಂತಹ ಚಿಕಿತ್ಸೆ, ಊಟ, ಉಪಚಾರದ ವ್ಯವಸ್ಥೆ ಸಹ ಮಾಡಲಾಗುತ್ತಿದ್ದು, ಇಲ್ಲಿ ದಿನದ 24 ಗಂಟೆಗಳ ಕಾಲ ವೈದ್ಯಾಧಿಕಾರಿಗಳು ಲಭ್ಯವಿರುತ್ತಾರೆ, ಇದರಿಂದ ಒಂದಷ್ಟು ರೋಗ ಹರಡುವುದನ್ನು ತಡೆ ಹಿಡಿಯಬಹುದಾಗಿದೆ.
ಈಗಾಗಲೇ ಸರಕಾರಿ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೆ ಸಾಕಷ್ಟು ಜನ ಹೈರಾಣಾಗಿರುವ ಹಿನ್ನೆಲೆಯಲ್ಲಿ ಕೇರ್ ಸೆಂಟರ್ ಅನಿವಾರ್ಯವಾಗಿರುವುದರಿಂದ ಸರಕಾರ ಈ ಕೆಲಸಕ್ಕೆ ಮುಂದಾಗಿದೆ, ಇದರಿಂದ ಬಹುತೇಕ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ.
ಪಾಸಿಟಿವ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಹೋಮ್ ಐಸೋಲೇಷನ್ ನಲ್ಲಿರುವುದು ಒಂದು ಕಡೆಯಾದರೆ ಏನೋ ಹಾಗೆ ಬಿಡುತ್ತದೆ ಎಂಬ ಭಯದಿಂದಲೇ ಆಸ್ಪತ್ರೆ ಬೇಕು, ಆಮ್ಲಜನಕ ಬೇಕು ಎಂದು ಹೋಗುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ, ಇದರಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಸಾಕಷ್ಟು ಪರದಾಟ ನಡೆಯುತ್ತಿದ್ದು ಸರಕಾರ ಮತ್ತು ಸಾರ್ವಜನಿಕರ ನಡುವೆ ದೊಡ್ಡ ಗುದ್ದಾಟವೇ ನಡೆಯುತ್ತಿದೆ, ಇದು ಕಡಿಮೆಯಾಗಬೇಕು ಎಂದರೆ ಸೆಂಟರ್‌ಗಳ ಅವಶ್ಯಕತೆ ಇದೆ.
ಪ್ರತಿ ತಾಲ್ಲೂಕುಗಳಲ್ಲಿಯೂ ಕೋವಿಡ್ ಕೇರ್ ಸೆಂಟರ್ ಮಾಡುತ್ತಿದ್ದು ಇದರಿಂದ ಆಸ್ಪತ್ರೆಗಳಿಗೆ ಹೋಗುವಂತಹ ಒತ್ತಡ ಕಡಿಮೆಯಾಗುತ್ತದೆ, ಇಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸೋಂಕಿತರಿಗೆ ಮಾಡಲಾಗುತ್ತದೆ, ಪ್ರತಿ ತಾಲ್ಲೂಕುಗಳಲ್ಲಿ 100 ರಿಂದ 150 ಹಾಸಿಗೆಯ ವ್ಯವಸ್ಥೆ ಮಾಡಲಾಗುತ್ತಿದ್ದು, ಇನ್ನೂ 3 ರಿಂದ 4 ದಿನದಲ್ಲಿ ಸಿದ್ಧವಾಗುತ್ತವೆ.
-ಡಾ.ನಾಗೇಂದ್ರಪ್ಪ, ಡಿಎಚ್‌ಓ, ತುಮಕೂರು.
ಹೋಮ್ ಐಸೋಲೇಷನ್, ಹೋಮ್ ಕ್ವಾರಂಟೈನ್‌ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸುವುದರಿಂದ ಬಹುತೇಕ ಅವರ ಕುಟುಂಬ ಹಾಗೂ ಸಮುದಾಯದಿಂದ ಸೋಂಕನ್ನು ದೂರವಿಡಬಹುದು.
-ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ.
Comments are closed.