ಬೆಂಗಳೂರು: ನೆನ್ನೆ ರಾಜ್ಯದಲ್ಲಿ 29, 744 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಭರ್ತಿ 201 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ 16, 545 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 6,70,201ಕ್ಕೆ ಏರಿಕೆ ಆಗಿದೆ.
ಮೇ ಮೊದಲ ಎರಡು ವಾರದೊಳಗೆ ದೇಶದಲ್ಲಿ 40 ಲಕ್ಷದಷ್ಟು ಕೊರೊನಾ ಪ್ರಕರಣಗಳು ಕಂಡು ಬರುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಅತ್ಯಂತ ವೇಗದಲ್ಲಿ ಕೋವಿಡ್ ಸೋಂಕು ಹರಡುತ್ತಿದೆ. ಈಗೀನ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಲೆಕ್ಕಹಾಕಿ ಮುಂದಿನ ತಿಂಗಳು ಕೊರೊನಾ ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ, ಆಸ್ಪತ್ರೆಯಲ್ಲಿ ಐಸಿಯು ದೊರೆಯದೆ ಹೆಚ್ಚು ಸಾವು ಸಂಭವಿಸುವ ಸಾಧ್ಯತೆ ದಟ್ಟವಾಗಿದ್ದು, ಕೊರೊನಾ ಸೋಂಕು ಹರಡದಂತೆ ಬ್ರೇಕ್ ಹಾಕಲು ಕೊರೊನಾ ಕರ್ಫ್ಯೂ ಜಾರಿಯಾಗಿದೆ. ಇದು ಸಾರ್ವಜನಿಕರ ಸಹಕಾರದಿಂದಲೇ ಸಾಧ್ಯ, ಆದಷ್ಟು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಬಹುಮುಖ್ಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.