839 ಮಂದಿಗೆ ಕೋವಿಡ್: 644 ಮಂದಿ ಬಿಡುಗಡೆ

ಮತ್ತೆ 5 ಮಂದಿ ಸಾವು

369

Get real time updates directly on you device, subscribe now.

ತುಮಕೂರು: ಮಂಗಳವಾರದಂದು 839 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 189 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 40,548 ಏರಿಕೆ ಕಂಡಿದೆ. 9,957 ಸಕ್ರಿಯ ಪ್ರಕರಣಗಳ ಪೈಕಿ 644 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 189, ಚಿನಾಹಳ್ಳಿ 80, ಗುಬ್ಬಿ 96, ಕೊರಟಗೆರೆ 34, ಕುಣಿಗಲ್ 35, ಮಧುಗಿರಿ 25, ಪಾವಗಡ 60, ಶಿರಾ 230, ತಿಪಟೂರು 53, ತುರುವೇಕೆರೆಯಲ್ಲಿ 37 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು ಕೋವಿಡ್ ನಿಂದ ತುರುವೇಕೆರೆ ತಾಲೂಕಿನ ಲೊಕಮ್ಮನಹಳ್ಳಿ ಗ್ರಾಮದ ವ್ಯಕ್ತಿ (55), ಪಾವಗಡ ತಾಲೂಕಿನ ಕುಮಾರಸ್ವಾಮಿ ಬಡವಣೆಯ ವ್ಯಕ್ತಿ (42), ಗುಬ್ಬಿ ತಾಲೂಕಿನ ಸಿಂಗೋನಹಳ್ಳಿ ಗ್ರಾಮದ ವ್ಯಕ್ತಿ (55), ತುಮಕೂರು ನಗರದ ಅಂಜನಾ ನಗರದ ವ್ಯಕ್ತಿ (30), ತುಮಕೂರು ನಗರದ ಪಿ.ಎಚ್ ಕಾಲೋನಿಯ ಮಹಿಳೆ (30) ಮೃತಪಟ್ಟಿದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದೆಲ್ಲವು ಭಾನುವಾರ ಲಾಕ್ ಡೌನ್ ಅವಧಿಯಲ್ಲಿ ಆರ್ ಟಿ ಪಿ ಸಿ ಆರ್ ಟೆಸ್ಟ್ ಗೆ ಒಳಪಟ್ಟವರಾಗಿದ್ದು ವೀಕೆಂಡ್ ಲಾಕ್ ಡೌನ್ ನಿಂದ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ.

Get real time updates directly on you device, subscribe now.

Comments are closed.

error: Content is protected !!