ಚಿಕಿತ್ಸೆ ಫಲಿಸದೆ ಚಿ.ನಾ.ಹಳ್ಳಿ ಯುವಕ ಸಾವು- ಮಹಾಮಾರಿ ಬಗ್ಗೆ ಎಚ್ಚರ ಅಗತ್ಯ

ಯುವಕರನ್ನೇ ಬಲಿ ಪಡೆಯುತ್ತಿದೆ ಕೊರೊನಾ ಮಾರಿ

138

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಹುಟ್ಟು ಆಕಸ್ಮಿಕ, ಸಾವು ಖಚಿತ, ಆದರೂ ಅತಿ ಸಣ್ಣ ವಯಸ್ಸಿನಲ್ಲಿ ಬಂದ ಸಾವನ್ನು ಯಾರಾದರು ಅರಗಿಸಿಕೊಳ್ಳಲು ಸಾಧ್ಯವೇ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದವನ, ಮದುವೆಯಾಗಿ ಇನ್ನೂ 6 ತಿಂಗಳ ದಾಂಪತ್ಯ ಜೀವನ ಅನುಭವಿಸಿದವನ, ಸಣ್ಣ ಮಕ್ಕಳಿಂದ ಅಪ್ಪ ಅಂತ ಕರಿಸಿಕೊಳ್ಳುತ್ತಿದ್ದವನ, ಓದು ಮುಗಿಸಿ ಕೆಲಸಕ್ಕೆ ಅರ್ಜಿ ಹಾಕಿಕೊಂಡವನರನ್ನು ಕೊರೊನಾ ಬಲಿ ಪಡೆಯುತ್ತಿದೆ, ಸಾವು ನ್ಯಾಯವೇ? ಕೊರೊನಾ ಹೆಮ್ಮಾರಿಗೆ ಯುವಕರೇ ಹೆಚ್ಚು ಬಲಿಯಾಗುತ್ತಿರುವುದು ನೋವಿನ ವಿಷಯವಾಗಿದೆ.
ತಾಲೂಕಿನ ಹಾಲುಕಟ್ಟೆ ಗೊಲ್ಲರಟ್ಟಿ ಗ್ರಾಮದ 28 ವರ್ಷದ ಯುವಕ ಮಂಜುನಾಥ್‌ ಮೊಬೈಲ್‌ ಸ್ಟೋರ್ ನಲ್ಲಿ ಯಶಸ್ಸು ಕಂಡಿದ್ದ, ಯುವಕನಿಕೆ ಕೊರೊನಾ ಸೋಂಕು ತಗುಲಿತ್ತು, ತುಮಕೂರು ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಪರದಾಡಿ ತಿಪಟೂರಿಗೆ ತೆರಳಿದ್ದರು, ಆದರೆ ತಿಪಟೂರಿನಲ್ಲು ಬೆಡ್‌ ಸಿಗದೆ ಹಾಸನದ ಮೆಡಿಕಲ್‌ ಕಾಲೇಜಿಗೆ ದಾಖಲು ಮಾಡಿದ ಅರ್ಧ ಗಂಟೆಯಲ್ಲಿ ಯುವಕ ಮಂಜುನಾಥ್‌ ಕೊನೆಯುಸಿರೆಳೆದಿದ್ದಾನೆ, ಮಂಜುನಾಥ್‌ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ, ಆದರೆ ಕೊರೊನಾ ಬಲಿ ಪಡೆದುಕೊಂಡಿತ್ತು.
ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೋ ಆರ್ಡಿನೇಟರ್‌ ಆಗಿ ಕೆಲಸ ಮಾಡುತ್ತಿದ್ದ ಮದನ್‌, ಆರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ, ಹಿಂದೂ ಪರ ಸಂಘಟನೆಯ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆಯಲ್ಲಿ ತೊಡಗಿಕೊಂಡಿದ್ದ ಯುವಕ, ಕೊರೊನಾ ಸೋಂಕು ತಗುಲಿದ ಒಂದು ವಾರದ ಒಳಗೆ ಸಾವನಪ್ಪಿದ್ದಾನೆ.
ಪಟ್ಟಣದ ಪುಟ್ಟ ಎಂಬ 37 ವರ್ಷದ ಯುವಕ ಸಣ್ಣ ಮಕ್ಕಳಿಂದ ಅಪ್ಪ ಎಂದು ಕರೆಸಿಕೊಳ್ಳುತ್ತಿದ್ದವನು, ಜೀವನಕ್ಕೆ ಮೊಬೈಲ್‌ ಸರ್ವಿಸ್‌ ಮಾಡಿಕೊಂಡಿದ್ದರು, ಮದುವೆಯಾಗಿ ಕೆಲ ವರ್ಷ ಕಳೆದಿದ್ದು ಸಣ್ಣ ಮಕ್ಕಳಿದ್ದರು, ಕೊರೊನಾದ ಕಣ್ಣಿಗೆ ಬಿದ್ದು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಾಗ ಸಾವನಪ್ಪಿದ್ದಾರೆ.
ತಾಲೂಕಿನ ಬುಕ್ಕಾಪಟ್ಟಣದ ಹಸನ್ಮುಖಿ ಯುವಕ ವೇಣು (32) ಎಂಎ ಪದವಿ ಮುಗಿಸಿ ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಿಕೊಂಡು ಸುಂದರ ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿ ಇದ್ದನು, ಸದ್ಯದ ಜೀವನಕ್ಕಾಗಿ ಟ್ಯಾಕ್ಸಿ ನಡೆಸುತ್ತಿದ್ದರು, ಆದರೆ ಕೊರೊನಾ ಸೋಂಕು ತಗುಲಿದ ಕೆಲವೆ ದಿನಗಳಲ್ಲಿ ಸಾವನಪ್ಪಿದ್ದಾನೆ, ಹಾಗೂ ತಿಮ್ಮನಹಳ್ಳಿ ಯುವಕ ಸಿದ್ದೇಶ್‌ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಕೊರೊನಾ ಇವನನ್ನು ಸಹ ಬಲಿ ಪಡೆದುಕೊಂಡಿದೆ.
ಹಣೆ ಬರಹದಲ್ಲಿ ಏನು ಬರೆದಿದೆ ಅದೇ ಆಗುತ್ತದೆ ಎಂದು ನಂಬಿ ಬದುಕುತ್ತಿರುವವರು ನಾವು, ಇಷ್ಟೇ ಇವರಿಗಿದ್ದ ಆಯಸ್ಸು ಅಂತ ಸಮಾಧಾನ ಮಾಡಿಕೊಳ್ಳಬೇಕಾ ಅಥವಾ ಕೊರೊನಾ ಉಲ್ಬಣವಾಗುತ್ತಿರುವವುದನ್ನು ತಡೆದು ಜೀವ ಉಳಿಸಿಕೊಳ್ಳಬೇಕೆ, ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದೆ, ಇದಕ್ಕೆ ಯುವಕರೇ ಹೆಚ್ಚು ಬಲಿಯಾಗುತ್ತಿದ್ದು ಕೊರೊನಾ ಲಕ್ಷಣ ಕಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.

Get real time updates directly on you device, subscribe now.

Comments are closed.

error: Content is protected !!