ಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

124

Get real time updates directly on you device, subscribe now.

ಮಧುಗಿರಿ: ಪಟ್ಟಣದ ಪುರಸಭೆ ವ್ಯಾಪ್ತಿಯ 16ನೇ ವಾರ್ಡ್‌ನ ಶನಿಮಹಾತ್ಮ ದೇವಸ್ಥಾನ ರಸ್ತೆಯ ಸ್ವಾಮಿ ಬಡಾವಣೆಗೆ ಹೊಂದಿಕೊಂಡಿರುವ ತೆರೆದ ಬಾವಿಯಲ್ಲಿ ರಾತ್ರಿ ಬಿದ್ದಿದ್ದ ಜಿಂಕೆಯನ್ನು ನಾಗರಿಕರು ಜೀವಂತವಾಗಿ ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಪುರಸಭೆ ಸದಸ್ಯ ಎಂ.ಆರ್‌.ಜಗನ್ನಾಥ್‌ ಅವರ ಸಂಬಂಧಿಕರಿಗೆ ಸೇರಿರುವ ತೆರೆದ ಬಾವಿಯಲ್ಲಿ ರಾತ್ರಿ ಜಿಂಕೆಯೊಂದು ಬಿದ್ದ ಪರಿಣಾಮ ಜಿಂಕೆ ನೀರು ಕುಡಿದಿದ್ದರಿಂದ ಸುಸ್ತಾದ ಸ್ಥಿತಿಯಲ್ಲಿತ್ತು, ಬಾವಿ ಬಳಿ ಬೆಳಗ್ಗೆ ನಾಯಿಗಳ ಚೀರಾಟದಿಂದ ನಾಗರಿಕರು ಹೋಗಿ ನೋಡಿದಾಗ ಜಿಂಕೆ ಇನ್ನೂ ಜೀವಂತವಾಗಿ ನಿತ್ರಾಣ ಸ್ಥಿತಿಯಲ್ಲಿ ಇತ್ತು, ನಂತರ ಬಾವಿಯಿಂದ ಜಿಂಕೆಯನ್ನು ಮೇಲೆತ್ತಿಕೊಂಡು ಬರಲಾಗಿದೆ, ಸ್ವಲ್ಪ ಸಮಯ ಧಣಿವಾರಿಸಿಕೊಂಡ ಜಿಂಕೆ ಜನರನ್ನು ಕಂಡು ಅತಿ ವೇಗವಾಗಿ ಅಲ್ಲಿಂದ ಕಾಲ್ಕಿತ್ತಿದೆ. ಈ ವ್ಯಾಪ್ತಿಯಲ್ಲಿ ಕರಡಿ, ಚಿರತೆ ಹಾವಳಿಯ ಜೊತೆಗೆ ಈಗ ಜಿಂಕೆಗಳು ಸಹ ಸೇರಿಕೊಂಡಂತಾಗಿದೆ, ಜಿಂಕೆಗಳು ಇತ್ತೀಚೆಗೆ ನಗರ ಪ್ರದೇಶದಲ್ಲಿ ಓಡಾಡುತ್ತಿದ್ದು ಬೈಪಾಸ್‌ ರಸ್ತೆಯಲ್ಲಿ ಹಿಂದೆ ಸತ್ತ ಸ್ಥಿತಿಯಲ್ಲಿ ಜಿಂಕೆ ದೊರೆತಿತ್ತು, ಅರಣ್ಯ ಇಲಾಖೆಯವರು ಜಿಂಕೆಗಳನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!