1,308 ಮಂದಿಗೆ ಕೋವಿಡ್: ಮತ್ತೆ 6 ಮಂದಿ ಸಾವು

465 ಸೋಂಕಿತರು ಬಿಡುಗಡೆ

529

Get real time updates directly on you device, subscribe now.

ತುಮಕೂರು: ತೀವ್ರ ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ದೊರೆಯದೆ ಪರದಾಡಿ ಬೆಂಗಳೂರಿನತ್ತ ಸಾಗುತ್ತಿರುವ ದೃಶ್ಯ ಕೆಲವು ಖಾಸಗಿ ಆಸ್ಪತ್ರೆಗಳ ಮುಂದೆ ಕಂಡು ಬಂದಿದೆ.
ಇನ್ನೂ ಗ್ರಾಮಾಂತರದಲ್ಲಿ ಸೋಂಕಿತರು ವೈದ್ಯರು ನೀಡುವ ಮಾರ್ಗದರ್ಶನದಂತೆ ಮನೆಯಲ್ಲೇ ಐಸೋಲೇಷನ್ ಆಗಿ ಗುಣಮುಖ ಹೊಂದುತ್ತಿದ್ದು, ಗುಣಮುಖರಾಗುತ್ತಿರುವ ಸಂಖ್ಯೆಯು ಹೆಚ್ಚುತ್ತಿದೆ. ಜ್ವರ, ಗಂಟಲು ನೋವು ಕಂಡುಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಕೋವಿಡ್ ಟೆಸ್ಟ್ ಮಾಡಿಸುವಂತೆ, ಯಾವುದೇ ಕಾರಣಕ್ಕೂ ತಾತ್ಸಾರ ಮಾಡದಂತೆ ಎಚ್ಚರವಹಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಬುಧವಾರದಂದು 1,308 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 650 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 41,856 ಏರಿಕೆ ಕಂಡಿದೆ. 10,794 ಸಕ್ರಿಯ ಪ್ರಕರಣಗಳ ಪೈಕಿ 465 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 650, ಚಿನಾಹಳ್ಳಿ 50, ಗುಬ್ಬಿ 36, ಕೊರಟಗೆರೆ 129, ಕುಣಿಗಲ್ 30, ಮಧುಗಿರಿ 54, ಪಾವಗಡ 57, ಶಿರಾ 140, ತಿಪಟೂರು 131, ತುರುವೇಕೆರೆಯಲ್ಲಿ 31 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ಗುಬ್ಬಿ ತಾಲೂಕಿನಮಹಾಲಕ್ಷ್ಮೀ ನಗರದ ವ್ಯಕ್ತಿ (62), ಮಧುಗಿರಿ ತಾಲೂಕಿನ ಕತ್ತಿರಾಜನಹಳ್ಳಿ ಗ್ರಾಮದ ಮಹಿಳೆ (41), ಅನ್ಯಕಾರಣದಿಂದ ತುಮಕೂರು ನಗರದ ಸೋಮೇಶ್ವರ ಬಡವಣೆಯ ಮಹಿಳೆ (60), ತುಮಕೂರು ನಗರದ ಸರಸ್ವತಿ ಪುರಂ ಬಡವಣೆಯ ವ್ಯಕ್ತಿ (60)ತುಮಕೂರು ನಗರದ ಶಿರಾಗೇಟ್ ನ ವ್ಯಕ್ತಿ (46), ತುಮಕೂರು ತಾಲೂಕಿನ ಕೊತ್ತಿಹಳ್ಳಿ ಗ್ರಾಮದ ವ್ಯಕ್ತಿ (47) ಮೃತಪಟ್ಟಿದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!