ಕೊರೊನಾ ಲಾಕ್ ಡೌನ್ ನಿಂದ ಮಧುಗಿರಿ ಸ್ಥಬ್ದ

258

Get real time updates directly on you device, subscribe now.

ಮಧುಗಿರಿ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್‌ ಡೌನ್ ಗೆ ಮಂಗಳವಾರ ರಾತ್ರಿಯಿಂದಲೇ ಆರಂಭವಾಗಿದೆ, ಬುಧವಾರ ಬೆಳಗ್ಗೆ 6 ರಿಂದ 10 ರವರೆಗೂ ಹಾಲು ತರಕಾರಿ ದಿನಸಿ ಮುಂತಾದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಬಳಿಕ ಎಲ್ಲವೂ ಬಂದ್‌ ಆದವು.
ಬೆಳಗ್ಗೆ ಹತ್ತು ಗಂಟೆಯಾಗುತ್ತಿದ್ದಂತೆ ಮಧುಗಿರಿ ಪಟ್ಟಣದಲ್ಲಿ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ಸಿಪಿಐ ಎಂ.ಎಸ್‌.ಸರ್ದಾರ್‌, ಪಿ ಎಸ್ ಐ ಮಂಗಳಗೌರಮ್ಮ ಅವರ ಜೀಪುಗಳು ಪಟ್ಟಣ ಸುತ್ತತೊಡಗಿದವು, ಅನಾವಶ್ಯಕವಾಗಿ ಓಡಾಡುತ್ತಿದ್ದ ನಾಗರಿಕರನ್ನು, ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿದ್ದವರನ್ನು, ಎಸ್ ಬಿ ಐ ಬ್ಯಾಂಕ್‌ ಶಾಖೆ ಮುಂದೆ ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಂತಿದ್ದ ಗ್ರಾಹಕರಿಗೆ ಪೊಲೀಸರು ಬುದ್ಧಿಮಾತು ಹೇಳಿ ಮಾರ್ಗಸೂಚಿ ಪಾಲಿಸುವಂತೆ ತಿಳಿಸಿದರು.
ಕೆ ಎಸ್ ಆರ್ ಟಿ ಸಿ ಬಸ್‌ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ, ಡೂಂಲೈಟ್‌ ವೃತ್ತ, ನೃಪತುಂಗ ವೃತ್ತದಿಂದ ಮಿನಿ ವಿಧಾನಸೌಧದ ಮುಂಭಾಗ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ವೃತ್ತ, ಸಿದ್ಧಾಪುರ ಗೇಟ್‌ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಪಟ್ಟಣದಲ್ಲಿರುವ ಎಂ ಎಸ್ ಐ ಎಲ್ ಗೆ ಬಂದ ಮದ್ಯದ ಲೋಡ್‌ನ್ನು ಅಬಕಾರಿ ಡಿವೈಎಸ್ಪಿ ಮತ್ತು ತಂಡದವರ ಸಮ್ಮುಖದಲ್ಲಿ ಇಳಿಸಲಾಯಿತು. ಪಟ್ಟಣದಲ್ಲಿ ಎಂಎ ಪದವೀಧರೆ ಮತ್ತು ಯುವಕ ವ್ಯಾಪಾರಸ್ಥ ಕೊರೊನಾ ಸೋಂಕಿನಿಂದ ಮೃತಪಟ್ಟ ಬಗ್ಗೆ ಚರ್ಚೆಗಳು ನಡೆದವು, ಕೊರೊನಾದ ಬಗ್ಗೆ ಭಯ ಪಡುವುದು ಕೊರೊನಾ ಸೋಂಕಿತನ ನೋವಿಗಿಂತ ದೊಡ್ಡದು, ಭಯ ಬಿಡಿ ಎಚ್ಚರದಿಂದಿರಿ ಎಂಬ ಮಾತುಗಳು ಕೇಳಿ ಬಂದವು.

Get real time updates directly on you device, subscribe now.

Comments are closed.

error: Content is protected !!