ಕೊಡಿಗೇನಹಳ್ಳಿ: ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಲಾಕ್ ಡೌನ್ ಘೋಷಣೆ ಆಗುತ್ತಿದಂತೆ ಪಾನ್ ಮಸಲಾ ಮತ್ತು ಗುಟ್ಕಾ ಬೆಲೆ ದಿಢೀರ್ ಏರಿಕೆಯಾಗಿದೆ.
ಮಧುಗಿರಿ, ಕೊರಟಗೆರೆ, ಶಿರಾ ಹಾಗೂ ಪಕ್ಕದ ಗೌರಿಬಿದನೂರು ತಾಲೂಕುಗಳಲ್ಲಿ ಗುಟ್ಕಾ ಮಾರುವ ಡೀಲರ್ ಏಕಾಏಕಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿವೆ.
ಲಾಕ್ ಡೌನ್ ಮುಂಜಾಗ್ರತೆಯಿಂದಾಗಿ ಚಿಲ್ಲರೆ ವ್ಯಾಪಾರಿಗಳು ಡೀಲರ್ ಗೆ ಮುಗಿಬಿದ್ದ ಕಾರಣ ಬೆಲೆ ಏರಿಕೆಯಾಗಿದೆ, ಈ ಬಗ್ಗೆ ಮಧುಗಿರಿ ಡೀಲರ್ ಒಬ್ಬರಿಗೆ ಮಾಹಿತಿ ಕೇಳಿದಾಗ ಪ್ರತಿಯೊಬ್ಬರಿಗೂ ಬಿಲ್ ನೀಡಲಾಗುತ್ತಿದೆ, ಕಂಪನಿ ನಿಗದಿಪಡಿಸಿರುವ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ, ಆದರೆ ರಿಟೇಲರ್ ಗಳು ಮಾತ್ರ ಮುಗಿಬಿದ್ದಿದ್ದು ಇನ್ನೂ ಹೆಚ್ಚಿನ ದರ ಆಗಬಹುದು ಎಂಬ ಕಾರಣಗಳಿಂದ ಎಂಬ ಮಾತು ಕೇಳಿ ಬರುತ್ತಿವೆ.
ರೀಟೆಲ್ ಅಂಗಡಿಗಳಲ್ಲಿ 5 ರೂ. ಬೆಲೆಯ ಗುಟ್ಕಾ 20 ರೂ., 15 ರೂ. ಬೆಲೆಯ ಗುಟ್ಕಾ 40 ರೂ. ವರೆಗೆ ಮಾರಾಟ ಮಾಡುತ್ತಿದ್ದು ಇದರ ಜೊತೆ ದಿನಸಿ ಬೆಲೆಯನ್ನು ಏಕಾಏಕಿ ಏರಿಸಿಲಾಗಿದೆ, ಯಾವುದೆ ಕಾನೂನಿನ ಭಯವಿಲ್ಲದೆ ಕೆಲ ಅಂಗಡಿ ಮಾಲೀಕರು ತಾವು ನಿಗದಿ ಪಡಿಸಿದಷ್ಟೆ ಬೆಲೆ ಎಂಬ ಹುಂಬತನ ಪ್ರದರ್ಶಿಸುತ್ತಿದ್ದು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಲಾಗಿದೆ.
ಚಿಲ್ಲರೆ ಅಂಗಡಿಗಳಲ್ಲಿ ಹಾಗೂ ಪಾನ್ ಅಂಗಡಿಗಳಲ್ಲಿ ಪಾನ್ ಮಸಾಲ ಕೇಳುವ ಹಾಗೆ ಇಲ್ಲ, ಅಂಗಡಿಯವರು ಕೇಳಿದಷ್ಟು ಕೊಟ್ಟು ಖರೀದಿಸಿಬೇಕು ಎಂದು ಗುಟ್ಕಾ ಹವ್ಯಾಸಿಗಳು ಪರದಾಡುತ್ತಿದ್ದಾರೆ.
ಗುಟ್ಕಾ, ಪಾನ್ ಮಸಾಲ ಬೆಲೆ ಮೂರು ಪಟ್ಟು ಹೆಚ್ಚಳ
Get real time updates directly on you device, subscribe now.
Prev Post
Next Post
Comments are closed.