ತುಮಕೂರು: ಪ್ರಸವ ವೇದನೆಯಿಂದ ನರಳುತ್ತಾ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಒದ್ದಾಡುತ್ತಿದ್ದ ಕೋವಿಡ್ ಸೋಂಕಿತ ಮೂವರು ಗರ್ಭಿಣಿಯರಿಗೆ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ ಶ್ಲಾಘನೆ ಪಾತ್ರರಾಗಿದ್ದಾರೆ.
ಮಂಗಳವಾರ ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಅನೇಕ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಬೆಡ್ ಸಿಗದೆ ಕೊನೆಗೆ ಸಿದ್ಧಗಂಗಾ ಆಸ್ಪತ್ರೆಗೆ ಆಗಮಿಸಿದ್ದರು, ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ.ಶೈಲಜಾ ಕೂಡಲೇ ಸಿಝೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು ಮೂವರೂ ಆರೋಗ್ಯದಿಂದ್ದಾರೆ.
ಪ್ರತ್ಯೇಕ ಕೋವಿಡ್ ಓಟಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಇದ್ದರೂ ಕೂಡ ಪ್ರತ್ಯೇಕವಾಗಿ ಕೋವಿಡ್ ಸೋಂಕಿತರಿಗಾಗಿಯೇ ಆಪರೇಷನ್ ಥಿಯೇಟರ್ ಇರುವುದಿಲ್ಲ, ಆದರೆ ಸಿದ್ಧಗಂಗಾ ಆಸ್ಪತ್ರೆ ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿಯೇ ಕೋವಿಡ್ ಸೋಂಕಿತರಿಗಾಗಿ ಪ್ರತ್ಯೇಕ ಕೋವಿಡ್ ಓಟಿ ತೆರೆದು ಅನೇಕ ಶಸ್ತ್ರಚಿಕಿತ್ಸೆ ನೀಡಿತ್ತು, ಇದೀಗ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಆಗಮಿಸುವ ಸೋಂಕಿತರ ಹೃದಯಾಘಾತ, ರಸ್ತೆ ಅಪಘಾತ ಹಾಗೂ ಗರ್ಭೀಣಿಯರ ಚಿಕಿತ್ಸೆಗಾಗಿ ಕೋವಿಡ್ ಓಟಿ ಪುನಃ ಆರಂಭಿಸಿದ್ದು ತುರ್ತು ಅಗತ್ಯ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಪತ್ರೆಯ ಪರವಾಗಿ ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಎಸ್.ಪರಮೇಶ್, ಸಿಇಓ ಡಾ.ಸಂಜೀವ್ ಕುಮಾರ್ ಪ್ರಸೂತಿ ತಜ್ಞೆ ಡಾ.ಶೈಲಜಾರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Comments are closed.