ಚಿಕ್ಕನಾಯಕನಹಳ್ಳಿ: ಕೊರೊನಾ ಸಂಕಷ್ಟ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಸಚಿವ ಉಮೇಶ್ ಕತ್ತಿ ಉದಾಸಿನ ಹೇಳಿಕೆ ನೀಡಿರುವುದು ಖಂಡನೀಯ, ಅಸಾಯಕತೆ ವ್ಯಕ್ತಪಡಿಸಿದ ವ್ಯಕ್ತಿಯಯನ್ನು ಸತ್ತೋಗು ಎಂದು ಹೇಳುವ ಸಚಿವ ಉಮೇಶ್ ಕತ್ತಿಯಿಂದ ರಾಜ್ಯದ ಜನರು ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ, ಕೂಡಲೇ ಮುಖ್ಯಮಂತ್ರಿಗಳು ಉಮೇಶ್ ಕತ್ತಿಯಿಂದ ರಾಜಿನಾಮೆ ಪಡೆಯಬೇಕು ಎಂದು ಕನ್ನಡ ಪರ ಸಂಘಟನೆಯ ಮುಖಂಡ ಗಂಗಾಧರ್ ಮಗ್ಗದ ಮನೆ ಆಗ್ರಹಿಸಿದ್ದಾರೆ.
ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೆ ತಲ್ಲಣಗೊಳಿಸುತ್ತಿರುವಾಗ ಬಡವರಿಗೆ ಜೀವನ ಮಾಡಲು ಸಹ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಜನರು ಜನನಾಯಕರ ಬಳಿಯೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಾಗಿದ್ದು ಹಾಗೂ ಅದಕ್ಕಾಗಿಯೆ ಜನಪ್ರತಿನಿಧಿಯನ್ನು ಮತ ಹಾಕಿ ಗೆಲ್ಲಿಸಿರುವುದು, ಆದರೆ ರಾಜ್ಯದ ಆಹಾರ ಮತ್ತು ನಾಗರಿಕ ಸಚಿವ ಉಮೇಶ್ ಕತ್ತಿ ಅಸಹಾಯಕ ಪ್ರಜೆಗೆ ಸತ್ತು ಹೋಗಲು ತಿಳಿಸಿರುವುದು ಹಾಗೂ ಆ ಪ್ರಜೆಯನ್ನು ಸಾಯಲು ಪ್ರಚೋದನೆ ಮಾಡುವ ರೀತಿ ತಿಳಿಸಿರುವುದು ಖಂಡನೀಯ. ಇವರು ಮಂತ್ರಿ ಸ್ಥಾನದಲ್ಲಿ ಕೆಲಸ ಮಾಡಲು ಅನರ್ಹರಾಗಿದ್ದಾರೆ, ಕೂಡಲೇ ಉಮೇಶ್ ಕತ್ತಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಮುಖ್ಯಮಂತ್ರಿಗಳು ಇವರ ರಾಜಿನಾಮೆ ಪಡೆಯಬೇಕು ಎಂದು ತಿಳಿಸಿದರು.
ಉಮೇಶ್ ಕತ್ತಿ ರಾಜಿನಾಮೆ ನೀಡಲಿ
Get real time updates directly on you device, subscribe now.
Prev Post
Next Post
Comments are closed.