ತಾಯಿ ಬಲಿ ಪಡೆದ ಕ್ರೂರಿ ಕೊರೊನಾ

ಸುದ್ದಿ ಕೇಳಿ ಮಗಳು ಹೃದಯಾಘಾತದಿಂದ ಸಾವು

399

Get real time updates directly on you device, subscribe now.

ತುಮಕೂರು: ಕ್ರೂರಿ ಕೊರೊನಾ ಎಂಥವರನ್ನೂ ಬಲಿ ಪಡೆಯುತ್ತಿದೆ, ಸಾಧಕರನ್ನು, ಸಾಧನೆಯ ಹಾದಿಯಲ್ಲಿ ಇದ್ದವರನ್ನು, ಶ್ರೀಮಂತರನ್ನು, ಬಡವರನ್ನು ಹೀಗೆ ಯಾರನ್ನೂ ಲೆಕ್ಕಿಸದೆ ಸಾವಿನ ಮನೆಗೆ ಕಳಿಸುತ್ತಿದೆ. ಈ ಮಹಾಮಾರಿ ಸಾವಿನ ಕೇಕೆ ಹಾಕುತ್ತಾ ಹೃದಯ ವಿದ್ರಾವಕ ಘಟನೆಗೂ ಸಾಕ್ಷಿಯಾಗುತ್ತಿದೆ.
ಮಗಳಿಗೆ ತಾಯಿ ಎಂದರೆ ಅಪಾರ ಪ್ರೀತಿ, ಅಮ್ಮನೇ ಮಗಳಿಗೆ ಸರ್ವಸ್ವ, ಆದರೆ ಅಮ್ಮನಿಗೆ ಕೊರೊನಾ ಮಾರಿ ಒಕ್ಕರಿಸಿದೆ, ಅಲ್ಲದೆ ಕೊರೊನಾ ಅನ್ನೋ ಕ್ರೂರಿ ತಾಯಿಯನ್ನು ಬಲಿ ಪಡೆದುಬಿಟ್ಟಿದೆ. ವಿಪರ್ಯಾಸ ಅಂದ್ರೆ ತಾಯಿಯ ಸಾವಿನ ಸುದ್ದಿ ಕೇಳಿದ ಪ್ರೀತಿಯ ಮಗಳು ಅದನ್ನು ಅರಗಿಸಿಕೊಳ್ಳಲಾಗದೆ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದಾಳೆ.
ಇಂಥ ಹೃದಯ ಕಲಕುವ ಘಟನೆ ನಡೆದಿರೋದು ತುಮಕೂರಿನಲ್ಲಿ. ಮಲ್ಲಿಕಾ (45) ಕೊರೊನಾದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಕೊರೊನಾ ಮಾರಿ ಆವರಿಸಿ ಚಿಕಿತ್ಸೆಗೂ ಸ್ಪಂದಿಸದೆ ಸಾವನ್ನಪ್ಪುತ್ತಾರೆ, ಮಗಳು ಮನೆಯಲ್ಲಿಯೇ ಇದ್ದಳು, ಬುಧವಾರ ತಾಯಿ ಸಾವಿನ ಸುದ್ದಿ ಕೇಳಿ ಏಕಾಏಕಿ ತೀವ್ರ ಎದೆ ನೋವಿನಿಂದ ಕಿರುಚುತ್ತಿದ್ದ ಮಗಳನ್ನು ಜಾಗೃತಿ (19) ಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.
ಅಮ್ಮನಿಗೆ ಕೊರೊನಾ ಪಾಸಿಟಿವ್ ಬಂದಿತ್ತು, ಆಸ್ಪತ್ರೆಗೆ ಸೇರಿಸಿದ್ದೆವು, ಅಕ್ಕನಿಗೆ ಕೊರೊನಾ ಇರಲಿಲ್ಲ, ಆಕೆ ವಿಶೇಷ ಚೇತನಳಾಗಿದ್ದು, ಅಮ್ಮನೊಂದಿಗೆ ಅವಿನಾಭಾವ ಸಂಬಂಧ ಇತ್ತು, ಅಮ್ಮ ಎಂದರೆ ಆಕೆಗೆ ವಿಶೇಷ ಪ್ರೀತಿ, ಮಂಗಳವಾರ ಅಕ್ಕನೊಂದಿಗೆ ಆಡಿಕೊಂಡು ಟಿವಿ ನೋಡುತ್ತಿದ್ದೆ, ಬುಧವಾರ ತಾಯಿ, ಅಕ್ಕ ಇಬ್ಬರು ನಮ್ಮೊಂದಿಗಿಲ್ಲ ಎಂದು ಮೃತಳ ಸಹೋದರಿ ಅಳಲು ತೋಡಿಕೊಂಡಿದ್ದಾಳೆ.

Get real time updates directly on you device, subscribe now.

1 Comment
  1. Iranna says

    Very very sad eeeee

Comments are closed.

error: Content is protected !!