ಸಾವಿರದ ಸಾಲಿನಲ್ಲೇ ಮತ್ತೆ ಸೋಂಕಿತರು

976 ಮಂದಿ ಚೇತರಿಕೆ

651

Get real time updates directly on you device, subscribe now.

ತುಮಕೂರು: ಗುರುವಾರದಂದು 1,171 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 558 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 43,027 ಏರಿಕೆ ಕಂಡಿದೆ. 10,983 ಸಕ್ರಿಯ ಪ್ರಕರಣಗಳ ಪೈಕಿ 976 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 558, ಚಿನಾಹಳ್ಳಿ 31, ಗುಬ್ಬಿ 88, ಕೊರಟಗೆರೆ 23, ಕುಣಿಗಲ್ 27, ಮಧುಗಿರಿ 69, ಪಾವಗಡ 55, ಶಿರಾ 167, ತಿಪಟೂರು 93, ತುರುವೇಕೆರೆಯಲ್ಲಿ 60 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ತುಮಕೂರು ತಾಲೂಕಿನ ಹೊದೆಕಲ್ಲು ಗ್ರಾಮದ ಮಹಿಳೆ (38), ಕುಣಿಗಲ್ ತಾಲೂಕಿನ ಕಡಸಿಂಗನಹಳ್ಳಿ ಗ್ರಾಮದ ವ್ಯಕ್ತಿ(51), ಕೊರಟಗೆರೆ ತಾಲೂಕಿನ ವೆಂಗಳ್ಮಮನಹಳ್ಳಿ ಗ್ರಾಮದ ಮಹಿಳೆ (65) ಅನ್ಯಕಾರಣದಿಂದ ತುಮಕೂರಿನ ಕುವೆಂಪು ನಗರದ ಮಹಿಳೆ (50), ತುಮಕೂರು ತಾಲೂಕಿನ ನಾಗವಲ್ಲಿ ವ್ಯಾಪ್ತಿಯ ಹನುಮಂತನಗರ ಬಡವಣೆಯ ವ್ಯಕ್ತಿ (60) ತುಮಕೂರು ತಾಲೂಕಿನ ಗೋವಿಂದಘಟ್ಟ ಗ್ರಾಮದ ವ್ಯಕ್ತಿ (55) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!