ಕೋವಿಡ್ ನಿಯಂತ್ರಣದಲ್ಲಿ ಮಾಹಿತಿ ಕೊರತೆ

ತಾಲ್ಲೂಕು ಆಡಳಿತದಿಂದ ದಿವ್ಯ ನಿರ್ಲಕ್ಷ್ಯ

355

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು ಸಾರ್ವಜನಿಕರಿಗೆ ಜಾಗೃತಿ ಹಾಗೂ ಕೋವಿಡ್ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಈ ಕೆಲಸಕ್ಕೆ ಮಾಧ್ಯಮ ಸಹಕಾರ ತುಂಬಾ ಅವಶ್ಯಕವಾಗಿದೆ, ಆದರೇ ತಾಲೂಕು ಆಡಳಿತ ಕೋವಿಡ್ ಗೆ ಸಂಬಂಧ ಪಟ್ಟ ಯಾವುದೇ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಲು ನಿರಾಕರಿಸುತ್ತಿದೆ.
ಕಳೆದ ವಾರ ಸಚಿವರು ಎರಡು ಬಾರಿ ಕೋವಿಡ್ ಗೆ ಸಂಬಂಧಿಸಿದ ಸಭೆ ನಡೆಸಿ ತಾಲೂಕಿನಲ್ಲಿ ಕೋವಿಡ್ ತಡೆಗಟ್ಟಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ ಸಭೆಗೆ ತಾಲ್ಲೂಕು ಆಡಳಿತ ಮಾಧ್ಯಮಕ್ಕೆ ಮಾಹಿತಿಯೇ ನೀಡಲಿಲ್ಲ. ಏಕಿಷ್ಟು ಉದಾಸೀನ ಎಂಬುದು ತಹಶೀಲ್ದಾರ್ ಮೇಡಂ ಹೇಳಬೇಕು. ತಾಲೂಕಿನಲ್ಲಿ ಕೋವಿಡ್ ನ ಪರಿಸ್ಥಿತಿ ಹಾಗೂ ಕೋವಿಡ್ ರೋಗಿಗಳ ಅಂಕಿ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ತಾತ್ಸಾರ ಮಾಡಲು ಕಾರಣವೇನು. ತಾಲೂಕಿನಲ್ಲಿ ಕೋವಿಡ್ ನಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ತಾಲೂಕು ಆಡಳಿತ ಕೋವಿಡ್ ತಡೆಗಟ್ಟಲು ಯಾವ ಕ್ರಮಕೈಗೊಂಡಿದೆ, ಯಾವ ಯಾವ ಮುಂಜಾಗೃತ ಕೈಗೊಳ್ಳಲಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ತಿಳಿಸಬೇಕಿದೆ, ಕನಿಷ್ಠ ಪಕ್ಷ ತಾಲೂಕು ಆಡಳಿತ ಕೋವಿಡ್ ಗೆ ಸಂಬಂಧಿಸಿದ ಸಭೆ ನಡೆಸಿ ವಾರ್ಡ್ ವಾರು ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಿದೆ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಉತ್ತರಿಸುತ್ತಾರ? ಇಲ್ಲಾ ಬೇಜವಾಬ್ದಾರಿತನ ತೋರುವರಾ ಎಂಬುದು ಕಾದು ನೋಡಬೇಕಿದೆ..

Get real time updates directly on you device, subscribe now.

Comments are closed.

error: Content is protected !!