ಶಿರಾ: ಪುಟ್ಟ ಗ್ರಾಮದಲ್ಲಿ 16 ಜನ ಸೋಂಕಿತರು, ಚಿಕಿತ್ಸೆಗೆ ಕೊವಿಡ್ ಕೇರ್ ಸೆಂಟರ್ ಗೆ ಬರಲು ಒಪ್ಪದ ಜನ, ಗುಡ್ಡದ ಹಟ್ಟಿ ಗ್ರಾಮಕ್ಕೆ ಆ್ಯಂಬುಲೆನ್ಸ್ ಸಮೇತ ಭೇಟಿ ನೀಡಿದ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ಸಮುದಾಯಕ್ಕೆ ಹರಡುತ್ತದೆ, ಇತರಿಗೆ ಸೋಂಕು ವ್ಯಾಪಿಸುತ್ತದೆ, ಬನ್ನಿ ನಾವಿದ್ದೇವೆ, ಆತಂಕ ಪಡ ಬೇಡಿ ಎಂದು ಚಿಕಿತ್ಸೆಗೆ ಕರೆದೊಯ್ದ ಶಾಸಕರ ಕಾರ್ಯ ವೈಖರಿ ಜನ ಮೆಚ್ಚುಗೆಗಳಿಸಿತು.
ಶಿರಾ ತಾಲೂಕಿನ ಗುಡ್ಡದಹಟ್ಟಿ ಗ್ರಾಮದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿತ್ತು, ಒಂದೇ 16 ಜನರಿಗೆ ಸೋಂಕು ಇದ್ದರು ಚಿಕಿತ್ಸೆಗೆ ಆಸ್ಪತ್ರೆಗೆ ಬರಲು ಒಪ್ಪುತ್ತಿರಲಿಲ್ಲ, ಆದ ಕಾರಣ ಸಾರ್ವಜನಿಕರು ಈ ಬಗ್ಗೆ ಶಾಸಕ ರಾಜೇಶ್‌ಗೌಡಗೆ ಮನವಿ ಮಾಡಿದರು, ತಕ್ಷಣ ಕಾರ್ಯ ಪ್ರವೃತ್ತರಾದ ಶಾಸಕರು ವೈದ್ಯ ಮತ್ತು ಆ್ಯಂಬುಲೆನ್ಸ್ ಸಹಿತ ಗುರುವಾರ ಗುಡ್ಡದ ಹಟ್ಟಿಗೆ ತೆರಳಿದರು. ರೋಗಿಗಳಲ್ಲಿ ವಿಶ್ವಾಸ ಮೂಡಿಸಿ ನಿಮಗೆ ಚಿಕಿತ್ಸೆ ಅಗತ್ಯವಿದೆ, ಇಲ್ಲಂದರೆ ಸಮುದಾಯಕ್ಕೆ ಸೋಂಕು ವ್ಯಾಪಿಸುತ್ತದೆ, ಇದರಿಂದ ಹಳ್ಳಿಯ ಎಲ್ಲಾ ಜನ ಆತಂಕ ಪಡುವಂತಾಗುತ್ತದೆ ಎಂದು ಮನವೊಲಿಸಿ ತಕ್ಷಣ ಶಿರಾ ಕಿತ್ತೂರರಾಣಿ ಚೆನ್ನಮ್ಮ ಕೊವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಿದರು. ಇಂತಹ ಸೇವಾ ಮನೋಭಾವವಿರುವ ಶಾಸಕರ ಕಾರ್ಯ ವೈಖರಿ ಜನ ಮೆಚ್ಚುಗೆ ಪಡೆಯಿತು.
ಇದೇ ಸಂದರ್ಭದಲ್ಲಿ ಸೋಂಕಿತರ ಪರೀಕ್ಷೆ ಪಲ್ಸ್ ಮೀಟರ್‌ಗಳನ್ನು ಆಶಾ ಕಾರ್ಯಕರ್ತರಿಗೆ ವಿತರಣೆ ಮಾಡಿ ಗ್ರಾಮದಲ್ಲಿ ಹೆಚ್ಚು ಸೋಂಕು ಹರಡದಂತೆ ಎಚ್ಚರ ವಹಿಸಿ ಎಂದರು.
ತಹಸೀಲ್ದಾರ್ ಮಮತ ಸೇರಿದಂತೆ ವೈದ್ಯರು ಹಾಗೂ ಸ್ವಯಂ ಸೇವಕರು, ಆಶಾ ಕಾರ್ಯಕರ್ತರು ಹಾಜರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗುರುವಾರ ಶಿರಾ ತಾಲೂಕಿನ ದಾಸರಹಳ್ಳಿ, ಕೆಂತರ್ಲಹಟ್ಟಿ, ಕೊಟ್ಟ, ಹುಳಿಗೆರೆ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ರಾಜೇಶ್ ಗೌಡ ಸೋಂಕಿತರ ಆರೋಗ್ಯ ವಿಚಾರಿಸಿದರು, ತದನಂತರ ಸಾರ್ವಜನಿಕರಿಗೆ ಅನಗತ್ಯವಾಗಿ ತಿರುಗಾಡದಂತೆ ಕೈಮುಗಿದು ಮನವಿ ಮಾಡಿದರು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರದಿಂದ ಇರುವಂತೆ ಮನವಿ ಮಾಡಿದರು.
ಪುಟ್ಟ ಗ್ರಾಮದಲ್ಲಿ 16 ಸೋಂಕಿತರು- ಮನವೊಲಿಸಿ ಆಸ್ಪತ್ರೆಗೆ ಕಳಿಸಿದ ಶಾಸಕರು
Get real time updates directly on you device, subscribe now.
Comments are closed.