ಕುಣಿಗಲ್: ಕೊರೊನಾ ಸೋಂಕು ವಿಷಯದಲ್ಲೂ ಪ್ರಚಾರ ಪಡೆಯುವ ಮನೋವೃತ್ತಿ ಸರಿಯಲ್ಲ, ಜನರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಹುಡುಕಬೇಕು ಎಂದು ಬಿಜೆಪಿ ಮುಖಂಡ, ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ತಿಳಿಸಿದರು.
ಗುರುವಾರ ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕೊವಿಡ್ ಸೋಂಕು ಪೀಡಿತ ವಾರ್ಡ್ ನಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ, ಯಾವುದೇ ವೈದ್ಯರು, ಸಿಬ್ಬಂದಿ ಸಮರ್ಪಕವಾಗಿ ಭೇಟಿ ನೀಡುತ್ತಿಲ್ಲ, ಆಮ್ಲಜನಕ ಅಗತ್ಯ ಇರುವ ಸೋಂಕಿತರಿಗೆ ಸರಿಯಾಗಿ ನೀಡುತ್ತಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿರುವವರು ದೂರವಾಣಿ ಮೂಲಕ ತಮಗೆ ಕರೆ ಮಾಡಿ ದೂರುತ್ತಿದ್ದಾರೆ, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಯಾವ ಸಮಸ್ಯೆ ಇದೆ, ಶುಚಿತ್ವ ಕಾಪಾಡಲು ತೊಂದರೆ ಏನು, ಸರಿಯಾದ ಶುಚಿತ್ವ ಕಾಪಾಡಿ, ಸೋಂಕಿತರ ಚಿಕಿತ್ಸೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಿ, ಆಸ್ಪತ್ರೆಯಲ್ಲಿ ಸಾಧ್ಯವಾದರೆ ಮತ್ತಷ್ಟು ಬೆಡ್ ವಿಸ್ತರಣೆ ಮಾಡಲು ಯಾವ ಕ್ರಮವಾಗಬೇಕು, ಸಮರ್ಪಕ ಮಾಹಿತಿ ನೀಡಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮಂಜೂರು ಮಾಡಿಸುವ ಭರವಸೆ ನೀಡಿದರು.
ಆಸ್ಪತ್ರೆ ಸಿಬ್ಬಂದಿ ಆಮ್ಲಜನಕ ದಿನಕ್ಕೆ 20 ಸಿಲೆಂಡರ್ ಬೇಡಿಕೆ ಇದೆ, ಆದರೆ 8 ರಿಂದ 10 ಪೂರೈಕೆಯಾಗುತ್ತಿದೆ, ಅಗತ್ಯ ತುರ್ತು ಸ್ಥಿತಿಯಲ್ಲಿನ ರೋಗಿಗಳಿಗೆ ಆಮ್ಲಜನಕ ನೀಡಲು ಕೆಲವೊಮ್ಮೆ ಸಮಸ್ಯೆ ಇದೆ ಎಂದರು.
ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ, ಎಡೆಯೂರು ಹೋಬಳಿಯ ಮಲ್ಲನಾಯಕನಹಳ್ಳಿ ಮುರಾರ್ಜಿ ಶಾಲೆಯಲ್ಲಿ ಪ್ರಾರಂಭವಾಗಲಿರುವ ಕೊವಿಡ್ ಕೇರ್ ಸೆಂಟರ್ ಗೂ ಭೇಟಿ ನೀಡಿ ಪರಿಶೀಲಿಸಿದರು. ವೈದ್ಯಾಧಿಕಾರಿ ಡಾ.ಗಣೇಶ್‌ಬಾಬು, ವೈದ್ಯ ಮಂಜುನಾಥ ಸ್ಮರಣ್, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಯುವ ಬಿಜೆಪಿ ಅಧ್ಯಕ್ಷ ಧನುಶ್ ಇತರರು ಇದ್ದರು.
ಕೊರೊನಾ ವಿಷಯದಲ್ಲೂ ಪ್ರಚಾರ ಪಡೆಯುವುದು ಸರಿಯಲ್ಲ
Get real time updates directly on you device, subscribe now.
Comments are closed.