ಕೋವಿಡ್ ಲಸಿಕೆಗೆ ನಾಳೆ ಆಸ್ಪತ್ರೆಗೆ ಬರಬೇಡಿ!

ರಾಜ್ಯಕ್ಕೆ ಲಸಿಕೆ ಬರೆ..

291

Get real time updates directly on you device, subscribe now.

ಬೆಂಗಳೂರು: ಕೋವಿಡ್ ಲಸಿಕೆ ವಿತರಣೆಯಲ್ಲಿ ಸಾಕಷ್ಟು ವಿಳಂಬ ಕಂಡುಬರುತ್ತಿದೆ. ಇನ್ನೇನು 18 ವಯಸ್ಸು ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ. ಇನ್ನೇನೂ ಕೊಟ್ಟೇ ಬಿಟ್ಟೆವು ಎಂಬ ಮಾತು ಹುಸಿಯಾಗಿದೆ.
ಕಾರಣ ಇಷ್ಟೇ, ಪುಣೆಯ ಸೀರಂ ಇನ್ಸ್ಟಿಟ್ಯೂಟ್ ನಿಂದ 1 ಕೋಟಿ ಡೋಸ್ ಲಸಿಕೆ ರಾಜ್ಯಕ್ಕೆ ಇನ್ನೂ ಪೂರೈಕೆಯಾಗಿಲ್ಲ ಎಂಬ ಮಹತ್ವದ ವಿಚಾರ ಬಹಿರಂಗಗೊಂಡಿದೆ. 18 ರಿಂದ 44 ವರ್ಷದವರಿಗೆ ಮೇ 1 ರಿಂದ ಲಸಿಕೆ ವಿತರಣೆ ನೀಡಲು ಸಾಧ್ಯವೇ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳುತ್ತಿದ್ದಾರೆ.
ರಾಜ್ಯದಲ್ಲಿ 18 ರಿಂದ 44 ವರ್ಷದವರು ಸುಮಾರು 3.5 ಕೋಟಿ ಜನರಿದ್ದಾರೆ, ಏ.28 ರಿಂದ ಕೋವಿಡ್ ಪೋರ್ಟಲ್ ನಲ್ಲಿ ನೋಂದಣಿ ಪ್ರಾರಂಭ ಮಾಡಲಾಗಿದ್ದು, 18 ರಿಂದ 44 ವರ್ಷದೊಳಗಿರುವ, ಹೆಸರು ನೊಂದಾಯಿಸಿದವರು ಆಸ್ಪತ್ರೆಗೆ ತೆರಳದಂತೆ ತಿಳಿಸಿದ್ದಾರೆ. ಮೇ ಮೂರನೇ ವಾರದಂದು ಲಸಿಕೆ ಅಭಿಯಾನ ಆರಂಭಿಸುವ ಸಾಧ್ಯತೆ ಇದ್ದು, ಕೋವಿಡ್ ಕಾರ್ಯಕರ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಕಾರ್ಯ ಮುಂದುವರೆಯಬಹುದಾಗಿದೆ.
ಲಸಿಕೆ ಉತ್ಪಾದನೆಯಲ್ಲಿ ಏಕಿಷ್ಟು ವಿಳಂಬ ಎಂಬ ಮಾಹಿತಿ ಇನ್ನೂ ದೊರೆತಿಲ್ಲ. ಲಸಿಕೆ ಬರುವವರೆಗೂ ಕಾಯಲೇಬೇಕಾಗಿದೆ.

Get real time updates directly on you device, subscribe now.

Comments are closed.

error: Content is protected !!