ನಕಲಿ ವೈದ್ಯ ನಡೆಸುತ್ತಿದ್ದ ಕ್ಲಿನಿಕ್ ಗೆ ಬೀಗ

302

Get real time updates directly on you device, subscribe now.

ಮಧುಗಿರಿ: ಪಟ್ಟಣದ ಗೌರಿಬಿದನೂರು ರಸ್ತೆ ಟಿವಿವಿ ಕಾಲೇಜಿನ ಎದುರುಗಡೆ ನೆಲ ಅಂತಸ್ತಿನಲ್ಲಿದ್ದ ನಕಲಿ ವೈದ್ಯನೊಬ್ಬನಿಂದ ದಿನ ನಡೆಯುತ್ತಿದ್ದ ಆರೋಗ್ಯ ಆಸ್ಪತ್ರೆಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳ ಶುಕ್ರವಾರ ಬೀಗ ಹಾಕಿಸಿದ ಘಟನೆ ನಡೆದಿದೆ.
ಆರೋಗ್ಯ ಕ್ಲಿನಿಕ್ ಮತ್ತು ಫಾರ್ಮಸಿ ಡಯಾಗ್ನಾಸ್ಟಿಕ್ ಹೆಸರಿನಲ್ಲಿ ಎಂಫಾರ್ಮ ಮಾಡಿರುವ ಲಕ್ಷ್ಮಿಕಾಂತ ನಡೆಸುತ್ತಿದ್ದ ಈ ಆಸ್ಪತ್ರೆ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೀಡಿದ್ದಾರೆ.
ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳು ಕ್ಲಿನಿಕ್ ಪ್ರವೇಶಿಸಿ ವೀಕ್ಷಿಸಿದಾಗ ಕ್ಲಿನಿಕ್ ಹೆಸರಿನಲ್ಲಿ ಚಿಕಿತ್ಸೆ ನಡೆಯುತ್ತಿದ್ದು ಕಂಡುಬಂದಿದೆ. ಎಂಫಾರ್ಮ ಮಾಡಿರೋರು ಮೆಡಿಕಲ್ ಸ್ಟೋರ್ನಷ್ಟೇ ನಡೆಸಬೇಕು ಎಂಬ ಕಾನೂನಿದೆ, ಕಾನೂನು ಮೀರಿ ಕ್ಲಿನಿಕ್ ನಡೆಸುತ್ತಿದ್ದುದರ ಬಗ್ಗೆ ಎಚ್ಚರಿಕೆ ನೀಡಿ ಬಾಗಿಲೂ ಹಾಕಿಸಲಾಗಿದೆ, ಮುಂದೆ ಕ್ಲಿನಿಕ್ ನಡೆಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ನೋಟಿಸ್ ನೀಡಿದ್ದಾರೆ.
ಇಂತಹ ಕ್ಲಿನಿಕ್ಗಳಿಂದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ, ಇವರು ಬೇಗ ಗುಣಮುಖರಾಗಲೆಂದು ಸ್ಟಿರಾಯ್ಡ್ ಗಳನ್ನು ನೀಡುತ್ತಾರೆ, ಇದರಿಂದ ಆರೋಗ್ಯಕ್ಕೂ ಅಡ್ಡಪರಿಣಾಮ ಆಗುವುದರ ಜತೆಗೆ ಕೋವಿಡ್ ಸೋಂಕಿತ ವ್ಯಕ್ತಿ ಕೊನೆಗಳಿಗೆಗೆ ಬಂದಾಗ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ, ಇಂತಹ ಕ್ಲಿನಿಕ್ಗಳ ಬಗ್ಗೆ ಮೊದಲೇ ತಿಳಿದ ನಂತರ ಚಿಕಿತ್ಸೆ ಪಡೆಯಬೇಕು, ಇಲ್ಲವಾದರೆ ತಮ್ಮ ಆರೋಗ್ಯ ಕೆಡಿಸಿಕೊಳ್ಳುವುದಕ್ಕೆ ಅವರೆ ಕಾರಣರಾಗುತ್ತಾರೆ. ಈ ಬಗ್ಗೆ ಜನ ಜಾಗೃತಿ ಅತ್ಯವಶ್ಯಕವಾಗಿ ಆಗಬೇಕಾಗಿದೆ ಎಂದರು.
ಡಯಾಗ್ನಸ್ಟಿಕ್ ಸೆಂಟರ್ ನಡೆಸಲು ಆತ ಎಂಬಿಬಿಎಸ್ ರೇಡಿಯಾಲಜಿ ವ್ಯಾಸಂಗ ಮಾಡಿರಬೇಕು, ಈತ ಮಾಡುವ ಡಯಾಗ್ನೆಸ್ ನಿಂದ ಯಾವುದೇ ಫಲಿತಾಂಶ ಪಡೆಯಲು ಸಾಧ್ಯವಿಲ್ಲ ಎಂದರು.
ಕೊವೀಡ್ ವ್ಯಾಕ್ಸಿನ್ ಹಾಕಿಸಲು ತಾಲ್ಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 13 ಉಪ ಕೇಂದ್ರಗಳಲ್ಲಿ ತೆರೆಯಲಾಗಿದೆ, ಪಟ್ಟಣದಲ್ಲಿ ಟಿವಿವಿ ಕಾಲೇಜು, ಉರ್ದು ಶಾಲೆ, ಡಿಡಿಪಿಐ ಕಚೇರಿ ಎದುರುಗಡೆ ಇರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಕ್ಸಿನ್ ಹಾಕಲಾಗುವುದು, ಇವು ಮೊಬೈಲ್ ತಂಡಗಳು ಆಗಿರೋದರಿಂದ ಗುಂಪು ಗುಂಪಾಗಿರುವ ಕಡೆ ತೆರಳಿ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!