ತುಮಕೂರು: ತುಮಕೂರಿನಲ್ಲಿ ಕೊರೊನಾಗೆ ಡೋಂಟ್ ಕೇರ್ ಎಂಬಂತೆ ಜನ ವರ್ತಿಸುತ್ತಿದ್ದಾರೆ.ಅದಕ್ಕೆ ಸಾಕ್ಷಿ ಎಂಬಂತೆ ಶುಕ್ರವಾರ ಕೋವಿಡ್-19 ಸೋಂಕಿತರ ಸಂಖ್ಯೆ 1,748ಕ್ಕೆ ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ ಅತೀ ಹೆಚ್ಚು 974 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 44,775 ಕ್ಕೆ ಏರಿಕೆ ಕಂಡಿದೆ. 11,872 ಸಕ್ರಿಯ ಪ್ರಕರಣಗಳ ಪೈಕಿ 850 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 974, ಚಿನಾಹಳ್ಳಿ 99, ಗುಬ್ಬಿ 61, ಕೊರಟಗೆರೆ 56, ಕುಣಿಗಲ್ 63, ಮಧುಗಿರಿ 48, ಪಾವಗಡ 24, ಶಿರಾ 70, ತಿಪಟೂರು 182, ತುರುವೇಕೆರೆಯಲ್ಲಿ 171 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ತುಮಕೂರು ನಗರ ಯಲ್ಲಪುರದ ವ್ಯಕ್ತಿ (55), ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದ ವ್ಯಕ್ತಿ (60), ಪಾವಗಡ ತಾಲೂಕಿನ ಪೋತಗನಹಳ್ಳಿ ಗ್ರಾಮದ ಮಹಿಳೆ (65) ಮಧುಗಿರಿ ತಾಲೂಕಿನ ಮೇದರಹಟ್ಟಿ ಗ್ರಾಮದ ಮಹಿಳೆ (27), ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಮಹಿಳೆ (65),ಅನ್ಯಕಾರಣದಿಂದ ತುಮಕೂರಿನ ಮಾರುತಿ ನಗರದ ವ್ಯಕ್ತಿ (41), ಶಿರಾ ನಗರದ ಜ್ಯೋತಿನಗರದ ವ್ಯಕ್ತಿ (54), ಕೊರಟಗೆರೆ ತಾಲೂಕಿನ ತೊಗರಿಘಟ್ಟ ಗ್ರಾಮದ ವ್ಯಕ್ತಿ (65), ತುಮಕೂರಿನ ಶಾಂತಿ ನಗರದ ಮಹಿಳೆ (67) ಒಟ್ಟಾರೆ 9 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Get real time updates directly on you device, subscribe now.
Prev Post
Comments are closed.