ಕುಣಿಗಲ್: ಕೊರೊನಾ ಫ್ರಂಟ್ ಲೈನ್ ವಾರಿಯರ್‌ಗಳಾದ ಪೊಲೀಸರಿಗೆ ಕೊರೊನಾ ಸೋಂಕಿನಿಂದ ಪಾರಾಗಲು ಆವಿ ಚಿಕಿತ್ಸೆಯನ್ನು ಪಟ್ಟಣ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಮಾಡಲಾಗಿದೆ.
ಕೊರೊನಾ ಸೋಂಕು ಹರಡದಂತೆ ಸೋಂಕು ಪೀಡಿತ ಪ್ರದೇಶದಲ್ಲೂ ಜನರನ್ನು ಎಚ್ಚರಿಸಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಪೊಲೀಸರು ಮೊದಲ ಹಂತದ ವಾರಿಯರ್ ಗಳಾಗಿ ಸೇವೆ ಸಲ್ಲಿಸುವ ಜೊತೆಯಲ್ಲಿ ಸೋಂಕಿಗೆ ಇವರೆ ಒಳಗಾಗುವ ಅಪಾಯವೂ ಹೆಚ್ಚಿರುತ್ತದೆ, ಸೋಂಕಿನಿಂದ ಪಾರಾಗಲು ಕುಣಿಗಲ್ ಪೊಲೀಸ್ ಠಾಣಾವರಣದಲ್ಲಿ ಬಿಸಿ ಆವಿಯ ಉಸಿರಾಟ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವಂತಾಗಿದೆ.
ದೊಡ್ಡ ಗಾತ್ರದ ಕುಕ್ಕರ್ ಗೆ ನೀರು ಹಾಕಿ ಅದರ ಮುಚ್ಚಳದ ನಳಿಕೆಯನ್ನು ಪ್ಲಾಸ್ಟಿಕ್ ಪೈಪ್ ಮೂಲಕ ಮುಚ್ಚಿ ಕುಕ್ಕರ್ ಬಿಸಿ ಮಾಡಿದಾಗ ಹೊರಬರುವ ಆವಿಯನ್ನು ಪೈಪ್ ಮೂಲಕ ಹರಿಯುವಂತೆ ಮಾಡಿ ಪೈಪ್‌ಗಳಿಗೆ ವಾಲ್ ಹಾಕಿ ಬೇಕಾದ ಸಿಬ್ಬಂದಿ ಕೆಲ ನಿಮಿಷ ಬಿಸಿ ಆವಿ ಉಸಿರಾಡಿದಾಗ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಬಿಸಿ ಆವಿಗೆ ಆಯುರ್ವೇದ ದ್ರವ್ಯಗಳನ್ನು ಸಹ ಬಳಸಿ ಆವಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಫ್ರಂಟ್ ಲೈನ್ ನಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ ಗಳಾದ ಪೊಲೀಸರು ಸೋಂಕಿನ ಭೀತಿಯ ನಡುವೆಯೂ ನೆಮ್ಮದಿಯಿಂದ ಕೆಲಸ ಮಾಡಲು ಸಹಕಾರಿಯಾಗಿದೆ. ಕಳೆದ ಬಾರಿ ಠಾಣೆಯಲ್ಲಿ ಆಯುರ್ವೇದ ಕಷಾಯ ಮಾಡಿ ಎಲ್ಲಾ ಸಿಬ್ಬಂದಿ ಸೇವಿಸುವ ವ್ಯವಸ್ಥೆ ಮಾಡಿಕೊಂಡಿದ್ದರು.
Get real time updates directly on you device, subscribe now.
Comments are closed.