ವರ್ಷಾಂತ್ಯದವರೆಗೂ ಕೊರೊನಾ ಕಾಟ ತಪ್ಪಿದ್ದಲ್ಲ!

ಈ ವರ್ಷದ ಹೊಸ ಯೋಜನೆ ಕೈಬಿಡಿ..

798

Get real time updates directly on you device, subscribe now.

ಬೆಂಗಳೂರು: ದೇಶದಲ್ಲಿ ಕೊರೊನಾದ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಮೇ ಮತ್ತು ಜೂನ್ ಮಾಹೆಯಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಇನ್ನೂ ವರ್ಷಾಂತ್ಯದವರೆಗೂ ಕೊರೊನಾ ಕಾಟ ತಪ್ಪಿದ್ದಲ್ಲ ಎಂಬ ಮಾಹಿತಿ ಹಿರಿಯ ವೈದ್ಯರಿಂದ ಹೊರಬಿದ್ದಿದೆ.
ಪ್ರತಿ ಐವರಲ್ಲಿ ಒಬ್ಬರಿಗೆ ಸೋಂಕು ಕಾಣಿಸುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಜೂನ್ ಕೊನೆ ವಾರದ ನಂತರ ಸೋಂಕು ಕೊಂಚ ಮಟ್ಟಿಗೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವರ್ಷ ಪೂರ್ತಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಬದುಕುವುದು ಅನಿವಾರ್ಯವೇ ಆಗಿದೆ.
ಜೀವ ಇದ್ದರೆ ಜೀವನ ಎನ್ನುವ ಮಾತಿಗೆ 2 ನೇ ಅಲೆ ಎಂತಹವರನ್ನು ಅಲರ್ಟ್ ಮಾಡಿದೆ. ಯಾವುದೇ ಹೊಸ ವ್ಯಾಪಾರಕ್ಕೆ, ಉದ್ದಿಮೆಗೆ, ಬಂಡವಾಳ ಹೂಡುವ ಯಾವುದೇ ಹೊಸ ಯೋಜನೆ ಆರಂಭಕ್ಕೆ ಈ ವರ್ಷವೂ ಸೂಕ್ತವಲ್ಲ ಎಂಬುದು ಖಚಿತವಾಗಿದೆ.
ಮನೆಯಲ್ಲೇ ಇದ್ದು ಸೋಂಕು ಹರಡದಂತೆ ತಡೆಗಟ್ಟಿ ಕೊರೊನಾದಿಂದ ಬಚಾವ್ ಆಗಲು ಜನ ಸಂಪರ್ಕದಿಂದ ದೂರ ಇರುವುದೇ ಇದಕ್ಕೆ ಸೂಕ್ತ ಪರಿಹಾರ.
ತಲೆ ನೋವು, ಜ್ವರ, ಕೆಮ್ಮು, ಶೀತ ಸೇರಿದಂತೆ ಯಾವುದೇ ಲಕ್ಷಣಗಳು ಕಂಡು ಬಂದರೂ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ, ಅಲ್ಲದೆ ಒತ್ತಡದ ಕೆಲಸದಿಂದ ಆರೋಗ್ಯದ ಕಡೆಗೆ ಗಮನ ನೀಡದಿದ್ದರೆ, ಜೀವ ಅಪಾಯದ ಸ್ಥಿತಿಗೆ ಬಂದು ನಿಲ್ಲುತ್ತದೆ. ಜಾಗರೂಕರಾಗಿರಿ, ಸಾಮಾಜಿಕ ಅಂತರ ಕಾಪಾಡಿ, ಕೊರೊನಾ ಚೈನ್ ಲಿಂಕ್ ಕತ್ತರಿಸಿ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್ ಮಂಜುನಾಥ್ ಎಚ್ಚರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!