ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಕೋವಿಡ್ 2ನೇ ಅಲೆ ಹರಡುತಿದ್ದು, ಈ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ಕುರಿತು ರಾಜಕೀಯ ಒಮ್ಮತ ಮೂಡಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ತನ್ನ ಟ್ವಿಟರ್ ನಲ್ಲಿ ಈ ಸಂದೇಶವನ್ನು ಪ್ರಕಟಿಸಿರುವ ಅವರು ಕೊರೊನಾ ಸೋಂಕನ್ನು ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ತಮ್ಮಗಳ ಕರ್ತವ್ಯವನ್ನು ತ್ವರಿತವಾಗಿ ಮಾಡಬೇಕಿದೆ, ಅಲ್ಲದೆ ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು, ಬಡ ಕುಟುಂಬಗಳ ಜೀವನ ನಿರ್ವಹಣೆಗೆ ರೂ 6 ಸಾವಿರ ನೀಡಬೇಕು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವ ಜೊತೆಗೆ ಅಗತ್ಯ ವೈದ್ಯಕೀಯ ಉಪಕರಣಗಳು, ಕಾಳಸಂತೆಯಲ್ಲಿ ಮಾರಾಟವಾಗುವ ಔಷಧಿಗಳನ್ನು ತಡೆಯಬೇಕು ಎಂದಿದ್ದಾರೆ.
ದೇಶದಲ್ಲಿರುವ ತುರ್ತು ಪರಿಸ್ಥಿತಿ ಕಂಡು ಬಡ ಕುಟುಂಬಗಳಿಗೆ 6 ಸಾವಿರ ನೀಡಬೇಕು ಎಂಬ ಹೇಳಿಕೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಕೊರೊನಾ ನಿಯಂತ್ರಕ್ಕೆ ಸೋನಿಯಾ ಗಾಂಧಿ ಸಲಹೆ?
Get real time updates directly on you device, subscribe now.
Prev Post
Next Post
Comments are closed.