ಕೊರೊನಾ ಕರ್ಫ್ಯೂ ಎಫೆಕ್ಟ್: 627 ಮಂದಿಗೆ ಸೋಂಕು

ಸಾವಿರ ಮಂದಿ ಚೇತರಿಕೆ!

308

Get real time updates directly on you device, subscribe now.

ತುಮಕೂರು: ಶನಿವಾರ ಕೋವಿಡ್-19 ಸೋಂಕಿತರ ಸಂಖ್ಯೆ 627ಕ್ಕೆ ಇಳಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 425 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 45,402 ಕ್ಕೆ ಏರಿಕೆ ಕಂಡಿದೆ. 11,405 ಸಕ್ರಿಯ ಪ್ರಕರಣಗಳ ಪೈಕಿ 1089 ಮಂದಿ ಬಿಡುಗಡೆ ಹೊಂದಿದ್ದಾರೆ.
ಕೊರೊನಾ ಕರ್ಪ್ಯೂ ಎಫೆಕ್ಟ್ ಗೆ. ಜಿಲ್ಲೆ ಮಟ್ಟಿಗೆ ನೆನ್ನೆಯ ಸೋಂಕಿತರ ವಿವರದಲ್ಲಿ ಸಾವಿರದ ಗಡಿ ದಾಟಿಲ್ಲ ಹಾಗೆಯೇ ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 425, ಚಿನಾಹಳ್ಳಿ 23, ಗುಬ್ಬಿ 17, ಕೊರಟಗೆರೆ 19, ಕುಣಿಗಲ್ 12, ಮಧುಗಿರಿ 11, ಪಾವಗಡ 33, ಶಿರಾ 22, ತಿಪಟೂರು 12, ತುರುವೇಕೆರೆಯಲ್ಲಿ 53 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ತುಮಕೂರು ನಗರ ದೇವನೂರು ಬಡವಣೆಯ ಮಹಿಳೆ (50), ತುಮಕೂರು ನಗರ ಎಸ್.ಐ.ಟಿ ಬಡವಣೆಯ ವ್ಯಕ್ತಿ (41), ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಬಿದರೆ ಗ್ರಾಮದ ಮಹಿಳೆ (60),ಅನ್ಯಕಾರಣದಿಂದ ತುಮಕೂರಿನ ಶಿರಾಗೇಟ್ ನ ಮಹಿಳೆ (35), ತುಮಕೂರು ತಾಲೂಕಿನ ಕಣ್ಣಕುಪ್ಪೆ ಗ್ರಾಮದ ಮಹಿಳೆ (47) ಒಟ್ಟಾರೆ 5 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಅದೇನೆ ಇರಲಿ, ಕೊರೊನಾ ಕರ್ಪ್ಯೂ ಅಂತು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದ್ದು, ಸೋಂಕು ತಡೆಗಟ್ಟುವ ವಿಚಾರದಲ್ಲಿ ಇನ್ನಷ್ಟು ಜಾಗೃತೆ ವಹಿಸುವುದು ಮತ್ತು ಎಚ್ಚರಿಕೆಯಿಂದ ಇರುವುದು ಅವಶ್ಯವಾಗಿದೆ.

Get real time updates directly on you device, subscribe now.

Comments are closed.

error: Content is protected !!