ತುಮಕೂರು: ಬೆಡ್ ಸಿಗದೆ ಕೂತಲ್ಲೇ ಕೊರೊನಾ ಸೋಂಕಿತ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಗುಬ್ಬಿ ತಾಲೂಕಿನ ಕಡಬ ನಿವಾಸಿ ಮಹಾದೇವಯ್ಯ(45) ಮೃತ ದುರ್ದೈವಿ, ಈತ ಉಸಿರಾಟದ ಸಮಸ್ಯೆ ಯಿಂದ ಬಳಲುತ್ತಿದ್ದ, ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಇದ್ದರೂ ಬೆಡ್ ನೀಡದೆ ಆರೋಗ್ಯ ಅಧಿಕಾರಿಗಳು ಸತಾಯಿಸಿದ್ದಾರೆ ಎಂದು ಮೃತನ ಸಂಬಂಧಿಕರು ದೂರಿದ್ದಾರೆ.
ಮಹಾದೇವಯ್ಯ ಕಡೆಯವರು ಬೆಡ್ ಇದೆ ಕೊಡಿ ಅಂತಾ ಮನವಿ ಮಾಡಿದರೂ ಅದು ನಿಮಗಲ್ಲ ಅಂತಾ ನಿರ್ಲಕ್ಷ್ಯ ಮಾಡಿದ್ದಾರೆ, ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳು ಇದ್ದರೂ ಸೋಂಕಿತರಿಗೆ ನೀಡುತ್ತಿಲ್ಲ, ಸೊಂಕಿತರ ಜೀವದ ಜೊತೆ ಜಿಲ್ಲಾ ಆರೋಗ್ಯ ಇಲಾಖೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬೆಡ್ ಸಿಗದೆ ಕೊರೊನಾ ಸೋಂಕಿತ ಸಾವು
Get real time updates directly on you device, subscribe now.
Prev Post
Comments are closed.