ಕುಣಿಗಲ್: ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ಜಾರಿಗೊಳಿಸಿರುವ ಲಾಕ್ ಡೌನ್ ನ ನಾಲ್ಕನೆ ದಿನ ಪೊಲೀಸರು ಮುಂಜಾಗ್ರತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಾಥಾ ನಡೆಸಿ ನಿರ್ಗತಿಕರಿಗೆ, ಕೊಳೆಯಾದ ಮಾಸ್ಕ್ ಧರಿಸಿದ್ದವರಿಗೆ ಹೊಸ ಮಾಸ್ಕ್ ನೀಡಿ ಅರಿವು ಮೂಡಿಸಿದರು.
ಶನಿವಾರ ಡಿವೈಎಸ್ಪಿ ರಮೇಶ್ ನೇತೃತ್ವದಲ್ಲಿ ಸಿಪಿಐಗಳಾದ ಡಿ.ಎಲ್.ರಾಜು. ಗುರುಪ್ರಸಾದ್ ಸಿಬ್ಬಂದಿ ಕೊರೊನಾ ನಿಯಂತ್ರಣ ಜಾಗೃತಿ ಫಲಕ ಹಿಡಿದು ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದರು, ಪೊಲೀಸ್ ವಾಹನಗಳಲ್ಲಿ ಅಳವಡಿಸಿದ್ದ ಮೈಕ್ ಮೂಲಕ ಲಾಕ್ ಡೌನ್ ಗೆ ಸ್ವಪ್ರೇರಣೆಯಿಂದ ಸಹಕಾರ ನೀಡುವಂತೆ ಕೋರಿದರು.
ಡಿವೈಎಸ್ಪಿ ರಮೇಶ್, ಜನರು ಜೀವ ಇದ್ದರೆ ಜೀವನ ಎಂಬ ಸತ್ಯ ಅರಿಯಬೇಕಿದೆ, ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರ ತಜ್ಞರ ಶಿಫಾರಸ್ಸಿನಂತೆ ಈ ಯೋಜನೆ ಘೋಷಿಸಿದೆ, ಇದನ್ನು ಜನರು ಪರಿಣಾಮಕಾರಿಯಾಗಿ ಪಾಲಿಸಿದಲ್ಲಿ ಸೋಂಕು ಹರಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಬಹುದು, ಸೋಂಕು ನಿಯಂತ್ರಿಸಬಹುದು, ಈಗಾಗಲೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ ಸೇರಿದಂತೆ ಅಗತ್ಯ ಸೌಲಭ್ಯ ಸಿಗುತ್ತಿಲ್ಲ, ಇದೆ ರೀತಿ ಸೋಂಕು ಮತ್ತಷ್ಟು ಹರಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂಬುದನ್ನು ಮರೆಯಬಾರದು, ಸೋಂಕು ನಿಯಂತ್ರಿಸುವ ಹೊಣೆ ಎಲ್ಲರ ಮೇಲಿದೆ, ಪೊಲೀಸ್ ಸಿಬ್ಬಂದಿಯು ಫ್ರಂಟ್ ಲೈನ್ ವಾರಿಯರ್ ಗಳಂತೆ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ, ಸಿಬ್ಬಂದಿ ಜನಪರ ಕಾಳಜಿಯಿಂದ ಜನರಿಗೆ ಹೆಚ್ಚು ಸೋಂಕು ಬಾರದ ರೀತಿಯಲ್ಲಿ ನಿಯಂತ್ರಿಸಲು ತಾವು ಅಪಾಯ ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ, ಎಲ್ಲಾ ವರ್ಗದ ಜನರು ಇದನ್ನು ಮನಗಂಡು ಪರಿಸ್ಥಿತಿಯ ಭೀಕರತೆ ಅರಿತು ಸಹಕಾರ ನೀಡಬೇಕೆಂದರು.
ಲಾಕ್ ಡೌನ್ ಪಾಲನೆ ಮಾಡಲು ವಿಫಲವಾದ ಮಳಿಗೆ ಮಾಲೀಕರಿಗೆ ಬುದ್ಧಿಹೇಳಿ ನಿಯಮ ಪಾಲಿಸದೆ ಇದ್ದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಬೀದಿಯಲ್ಲಿ ಭಿಕ್ಷೆ ಮಾಡುತ್ತಿದ್ದ ಭಿಕ್ಷುಕನಿಗೆ, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಕುಟುಂಬದವರಿಗೂ ಮಾಸ್ಕ್ ವಿತರಿಸಿದರು.
ಮಾಸ್ಕ್ ನೀಡಿ ಪೊಲೀಸರಿಂದ ಕೊರೊನಾ ಬಗ್ಗೆ ಅರಿವು
Get real time updates directly on you device, subscribe now.
Comments are closed.