ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟ

ಆರೋಪಿಗಳು ಅಂದರ್!

228

Get real time updates directly on you device, subscribe now.

ತುಮಕೂರು: ದೇಶವ್ಯಾಪಿ ಹರಡಿರುವ ಕೊರೊನಾ ಸಾಂಕ್ರಾಮಿಕ ಮಹಾಮಾರಿಗೆ ಚಿಕಿತ್ಸೆ ಸಲುವಾಗಿ ಉಪಯೋಗಿಸುವ ರೆಮ್ಡಿಸಿವರ್ ಇಂಜೆಕ್ಷನನ್ನು ಕೋವಿಡ್ ರೋಗಿಗಳಿಗೆ ಕಾಳಸಂತೆಯಲ್ಲಿ ಹೆಚ್ಚಿನ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಖತರ್ ನಾಕ್ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಸೈಯ್ಯದ್ ಹರ್ಷದ್ ಟನ್ ನಿಸ್ಟಾರ್ ರಜಾಕ್ (23), ರಖೀಟ್ ಅನ್ ರೆಹಮತ್ ಉಲ್ಲಾ (30), ರಂಗನಾಥ ಬಂಧಿತ ಆರೋಪಿಗಳು. ನೆನ್ನೆ ನಗರದ ಗುಂಚಿ ಸರ್ಕಲ್ ನಲ್ಲಿ ಬಂಧಿಸಿ ಇವರ ಬಳಿ ಇದ್ದ ರೆಮ್ಡಿಸಿವರ್ ಲಸಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. 4,700 ರೂಪಾಯಿ ಬೆಲೆ ಬಾಳುವ ಇಂಜೆಕ್ಷನನ್ನು 17 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಎಸ್ಪಿ ಕೋನಾ ವಂಶಿ ಕೃಷ್ಣ, ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷ ಉದೇಶ್ ಜೆ. ಕೆ.ಎಸ್.ಪಿ.ಎಸ್ ಮಾರ್ಗದರ್ಶನದಲ್ಲಿ, ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ವಿ ಶೇಷಾದ್ರಿ, ತುಮಕೂರು ನಗರ ಪೊಲೀಸ್ ಠಾಣಾ ಪಿ.ಎಸ್.ಐ ಮಂಜುನಾಥ ಬಿ.ಸಿ ಹಾಗೂ ತುಮಕೂರು ವೃತ್ತದ ಡ್ರಗ್ ಕಂಟ್ರೋಲರ್-2 ಮಮತಾ ವಿ ಹಾಗೂ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅಯೂಬ್ ಜಾನ್, ನಾಗರಾಜು, ರವಿ ರೆಡ್ಡಿ ವಿಶೇಷ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ರೀತಿ ಕಾಳಸಂತೆಯಲ್ಲಿ ರಮ್ಡಿಸಿವರ್ ಇಂಜೆಕ್ಷನ್ನ್ನು ಯಾರಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ, ಸಾರ್ವಜನಿಕರು ತುಮಕೂರು ಜಿಲ್ಲಾ ಪೊಲೀಸ್ ನಿಯಂತ್ರಣ ವಿಭಾಗ ಮೊ.9480802909 ಗೆ ಮತ್ತು ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!