ಮತ್ತೆ 2,854 ಮಂದಿ ಕೋವಿಡ್ ಸೋಂಕಿತರು:10 ಸಾವು

724

Get real time updates directly on you device, subscribe now.

ತುಮಕೂರು: ಸೋಮವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,854ಕ್ಕೆ ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 939 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 50,529 ಕ್ಕೆ ಏರಿಕೆ ಕಂಡಿದೆ. 13,897 ಸಕ್ರಿಯ ಪ್ರಕರಣಗಳ ಪೈಕಿ 1,268 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 939, ಚಿನಾಹಳ್ಳಿ 86, ಗುಬ್ಬಿ 172, ಕೊರಟಗೆರೆ 160, ಕುಣಿಗಲ್ 275, ಮಧುಗಿರಿ 242, ಪಾವಗಡ 211, ಶಿರಾ 219, ತಿಪಟೂರು 389, ತುರುವೇಕೆರೆಯಲ್ಲಿ 161 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ತುಮಕೂರು ತಾಲೂಕು ಅಲುಪನಹಳ್ಳಿ ಗ್ರಾಮದ ಮಹಿಳೆ(60), ತುರುವೇಕೆರೆ ತಾಲೂಕಿನ ನೇರಳೆಕೆರೆ ಗ್ರಾಮದ ಮಹಿಳೆ (60) ಕುಣಿಗಲ್ ತಾಲೂಕಿನ ಕುರುಡಿಹಳ್ಳಿ ಗ್ರಾಮದ ವ್ಯಕ್ತಿ (49), ಪಾವಗಡ ತಾಲೂಕಿನ ಮಹಿಳೆ (65), ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮದ ವ್ಯಕ್ತಿ (43) ಅನ್ಯಕಾರಣದಿಂದ ತುಮಕೂರಿನ ತಾಲೂಕಿನ ಕೊತ್ತಿಹಳ್ಳಿ ಗ್ರಾಮದ ವ್ಯಕ್ತಿ(70),ಕುಣಿಗಲ್ ತಾಲೂಕಿನ ಶಿವರಾಮಪುರ ಗ್ರಾಮದ ಮಹಿಳೆ (80), ಮುಧುಗಿರಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ವ್ಯಕ್ತಿ (55), ಪಾವಗಡ ತಾಲೂಕಿನ ಬನಶಂಕರಿ ಬಡಾವಣೆಯ ಮಹಿಳೆ (47), ತುಮಕೂರು ನಗರ ಹೆಗ್ಗೆರೆ ಬಡವಣೆಯವ್ಯಕ್ತಿ (51) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!