ಕೊರಟಗೆರೆ: ಅಕ್ರಮವಾಗಿ ಮಣ್ಣು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ರಾಕ್ಟರ್ ಚಾಲಕನ ಅವೈಜ್ಞಾನಿಕ ಮತ್ತು ಅತಿವೇಗದ ಚಾಲನೆಯಿಂದ ಐಸ್ ಕ್ರೀಂ ಮಾರಾಟ ಮಾಡಲು ತೆರಳುತ್ತಿದ್ದ ದ್ವೀಚಕ್ರ ವಾಹನದ ಮೇಲೆ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಸಮೀಪದ ಟ್ರಾಕ್ಟರ್ ಮತ್ತು ದ್ವೀಚಕ್ರ ವಾಹನದ ನಡುವೆ ಅಪಘಾತ ನಡೆದಿದ್ದು ಅಲಪನಹಳ್ಳಿಯ ಲಿಂಗಪ್ಪ (50) ಮೃತ ದುರ್ದೈವಿ.
ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿಯಿಂದ ಲಂಕೇನಹಳ್ಳಿ ಸಂಪರ್ಕ ಕಲ್ಪಿಸುವ ಮಾರ್ಗದ ಮಧ್ಯೆ ನಡೆದ ಅಪಘಾತದಲ್ಲಿ ಟ್ರಾಕ್ಟರ್ ಚಾಲಕನ ಅತಿವೇಗದ ಚಾಲನೆಯಿಂದ ದ್ವೀಚಕ್ರ ವಾಹನದ ಮೇಲೆ ಹರಿದು ದ್ವೀಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಅಕ್ರಮವಾಗಿ ಮಣ್ಣು ಸಾಕಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಅಪಘಾತ ಆದ ತಕ್ಷಣವೇ ಸವಾರ ಸ್ಥಳದಿಂದ ಟ್ರಾಕ್ಟರ್ ಸಮೇತ ಪರಾರಿ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ದ್ವೀಚಕ್ರ ವಾಹನ ಓದ್ದಾಡುತ್ತಿದ್ದರೂ ಟ್ರಾಕ್ಟರ್ ನಿಲ್ಲಿಸಿದೇ ಸವಾರ ಸ್ಥಳದಿಂದ ಪರಾರಿ ಆಗಿದ್ದಾನೆ.
ಅಪಘಾತ ಸ್ಥಳಕ್ಕೆ ಕೊರಟಗೆರೆ ಸಿಪಿಐ ಅನಿಲ್ ಬೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಟ್ರಾಕ್ಟರ್ ಮತ್ತು ಚಾಲಕನ ಸೇರೆಗೆ ಈಗಾಗಲೇ ಪೊಲೀಸರು ಬಲೆಬಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು