ಕುಣಿಗಲ್: ಕೊರೊನಾ ಸೋಂಕಿತರ ಚಿಕಿತ್ಸೆ ಹಾಗೂ ವಾರ್ಡ್‌ನಲ್ಲಿ ಸ್ವಪ್ರೇರಣೆಯಿಂದ ಕೆಲಸ ನಿರ್ವಹಣೆ ಮಾಡುವ ಶಾಸಕರ ಆಪ್ತ ಸಹಾಯಕರ ಕಾರ್ಯವೈಖರಿ ರಾಜಕೀಯ ಚರ್ಚೆಗೆ ಗ್ರಾಸವಾಗಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.
ಕೊವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆಯಾದಾಗಿನಿಂದಲೂ ಶಾಸಕ ಡಾ.ರಂಗನಾಥ್ ದಿನಾಲೂ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಸೋಂಕಿತರಿಗೆ ಧೈರ್ಯ ತುಂಬುವ ಜೊತೆಯಲ್ಲಿ ಹೆಚ್ಚುವರಿ ಚಿಕಿತ್ಸೆ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾಗುವ ಔಷಧಿ, ಆಕ್ಸಿಜನ್ ಪೂರೈಕೆ ನಿಟ್ಟಿನಲ್ಲಿ ಸ್ಥಳೀಯ ವೈದ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ, ಶಾಸಕರ ಸೂಚನೆ ಮೇರೆಗೆ ಅವರ ಅಪ್ತಸಹಾಯಕ ಚಂದ್ರಶೇಖರ್, ಕೊವಿಡ್ ವಾರ್ಡ್‌ನಲ್ಲಿನ ರೋಗಿಗಳ ಸೇವೆಗೆ ನಿಂತು ಸೋಂಕಿತರಿಗೆ ಧೈರ್ಯ ತುಂಬುವ ಜೊತೆಯಲ್ಲಿ ಶಾಸಕರಿಗೆ ದೈನಂದಿನ ಚಟುವಟಿಕೆ ಮಾಹಿತಿ ನೀಡುತ್ತಿದ್ದಾರೆ.
ಶಾಸಕರ ಅಪ್ತ ಸಹಾಯಕ ಸ್ವಪ್ರೇರಣೆಯಿಂದ ಸೋಂಕಿತರಿಗೆ ಸೇವೆ ನೀಡಲು ವಾರ್ಡ್‌ನಲ್ಲಿ ಶ್ರಮಿಸುತ್ತಿದ್ದು, ಇದು ಬೇರೆ ರೀತಿಯ ವಿಷಯಕ್ಕೆ ಚರ್ಚೆಗೆ ಗ್ರಾಸವಾಗಿ, ವಿರೋಧ ಪಕ್ಷಗಳ ಕಾರ್ಯಕರ್ತರ ಟೀಕಿಸಿದ್ದಾರೆ. ಪಿಪಿಇ ಕಿಟ್ ಇಲ್ಲದೆ ಕೋವಿಡ್ ವಾರ್ಡ್‌ನಲ್ಲಿ ಸೇವೆ ಸಲ್ಲಿಸುವುದು ಎಷ್ಟು ಸರಿ, ಸೋಂಕಿತರ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪಕ್ಷದ ಜೊತೆ ಗುರುತಿಸಿ ಕೊಂಡಿರುವವರಿಗೆ ಅನುಕೂಲ ಸೇರಿದಂತೆ ಇತರೆ ವಿಷಯಗಳ ಆರೋಪ ಮಾಡಿದ್ದಾರೆ.
ಇದಕ್ಕೆ ಸವಾಲು ಹಾಕಿರುವ ಶಾಸಕರ ಆಪ್ತ ಸಹಾಯಕ ತಾವು ಜನರ ಕಷ್ಟ ಬಗೆಹರಿಸಲು ಸ್ವಪ್ರೇರಣೆಯಿಂದ ಶಾಸಕರ ಅನುಮತಿ ಪಡೆದು ಸೇವೆ ನೀಡುತ್ತಿದ್ದೇನೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ, ನನ್ನ ಸೇವೆಯಲ್ಲಿ ಲೋಪ ಗುರುತಿಸಿ ಇಲ್ಲಸಲ್ಲದ ಆರೋಪ ಮಾಡುವ ವಿರೋಧ ಪಕ್ಷದ ಕಾರ್ಯಕರ್ತರು ತಾಖತ್ ಇದ್ದರೆ ಸ್ವಪ್ರೇರಣೆಯಿಂದ ಬಂದು ಸೋಂಕಿತರ ವಾರ್ಡ್‌ನಲ್ಲಿ ಸೇವೆ ಸಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ವಿರೋಧ ಪಕ್ಷದವರು ತಮ್ಮ ನಾಯಕರು ಸಹ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಶ್ರಮಿಸುತ್ತಿದ್ದು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಸೇವೆ ಮಾಡಿ ಪ್ರಚಾರ ಬೇಡ ಎಂಬ ವಾದ ಮುಂದಿಟಿದ್ದರೆ, ನಾಗರಿಕರು ದಿನಾಲೂ ಜನ ಸೋಂಕಿನಿಂದ ಸಾಯುತ್ತಿದ್ದಾರೆ, ಪ್ರಚಾರ ಬದಿಗೊತ್ತಿ ತಾಲೂಕಿನ ಜನತೆಗೆ ಏನು ಆಗಬೇಕೆಂದು ಎಲ್ಲಾ ಪಕ್ಷದವರು ಚಿಂತಿಸಿ ತಾಲೂಕಿನಲ್ಲಿ ಕೋವಿಡ್ ಸೋಂಕಿನಿಂದ ಹೆಚ್ಚಿನ ಸಾವು ನೋವು ಆಗದಂತೆ ಕ್ರಮ ವಹಿಸುವಂತೆ ಸಲಹೆ ನೀಡಿದ್ದಾರೆ.
ಶಾಸಕರ ಆಪ್ತ ಸಹಾಯಕನ ನಡೆಗೆ ಅಸಮಾಧಾನ
Get real time updates directly on you device, subscribe now.
Next Post
Comments are closed.