ಅನ್ನದಾತ ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸಲು ಮುಂದಾದ ಅಧಿಕಾರಿಗಳು

ರೈತರ ಸಹಾಯಕ್ಕೆ ನಿಂತ ತೋಟಗಾರಿಕೆ ಇಲಾಖೆ

224

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವ ರೈತರ ನೆರವಿಗೆ ತೋಟಗಾರಿಕೆ ಇಲಾಖೆ ಧಾವಿಸಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಸಲುವಾಗಿ ಸಹಾಯವಾಣಿ ಪ್ರಾರಂಭಿದೆ, ತರಕಾರಿ, ಹಣ್ಣು, ಹೂವು ಸೇರಿದಂತೆ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಕೊಡಿಸುವಲ್ಲಿ ಇಲಾಖೆ ಕಾರ್ಯ ಪ್ರವೃತ್ತವಾಗಿದೆ.
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು ತಾಲೂಕು ಆಡಳಿತ 14 ದಿನ ಕರ್ಪ್ಯೂ ಜಾರಿಗೊಳಿಸಿದ್ದು, ಸಂತೆ, ದಿನನಿತ್ಯ ನಡೆಯುವ ಮಾರ್ಕೆಟ್‌, ತರಕಾರಿ ಅಂಗಡಿಗಳು ಸಂಪೂರ್ಣ ಬಂದ್‌ ಆಗಿವೆ, ಇದರಿಂದ ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯ ಅವಶ್ಯಕತೆ ಇದ್ದು ತೋಟಗಾರಿಕೆ ಇಲಾಖೆ ರೈತ ಹಾಗೂ ಖರೀದಿದಾರರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದೆ. ತಾಲೂಕಿನಲ್ಲಿ ರೈತರು ಬೆಳೆದ ಹೂ, ತರಕಾರಿ, ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯ ಸಹಾಯದೊಂದಿಗೆ ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ.
ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಉಪನಿರ್ದೇಶಕರು, ತಾಲೂಕು ಮಟ್ಟದ ಅಧಿಕಾರಿಗಳು, ಹೋಬಳಿ ಮಟ್ಟದ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ತಾಂತ್ರಿಕ ಸಲಹೆ, ಮಾರುಕಟ್ಟೆಗಳ ಮಾಹಿತಿ, ತಾಲೂಕು, ಜಿಲ್ಲೆಯ ಸುತ್ತಮುತ್ತಲಿರುವ ಖರೀದಿದಾರರ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಕರ್ಪ್ಯೂ ಸಮಯದಲ್ಲಿ ರೈತರಿಗೆ ನೆರವಾಗುತ್ತಿದ್ದಾರೆ.
14 ದಿನಗಳ ಕರ್ಪ್ಯೂ ಸಮಯದಲ್ಲಿ ರೈತರು ತಮ್ಮ ಬೆಳೆಗಳಿಗೆ ತೋಟಗಾರಿಕೆ ಇಲಾಖೆಯ ಸಹಾಯದಿಂದ ಮಾರಕಟ್ಟೆ ಪಡೆದುಕೊಳ್ಳಬಹುದಾಗಿದೆ, ಮಧ್ಯವರ್ತಿಗಳ ತೊಂದರೆಯಿಲ್ಲದೆ ತಮ್ಮ ಬೆಳೆಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ಕಲ್ಲಂಗಡಿ, ಟೊಮೆಟೊ, ಮೆಣಸಿನಕಾಯಿ, ಬದನೆ, ಹೂಗಳು, ಸೋಪ್ಪು ಸೇರಿದಂತೆ ಇತರೆ ರೈತರ ಬೆಳೆಗಳಿಗೆ ತೋಟಗಾರಿಕೆ ಇಲಾಖೆ ಮಾರುಕಟ್ಟೆ ನೀಡಲಿದೆ.
ತೋಟಗಾರಿಕೆ ರೈತರ ಸಹಾಯವಾಣಿ ತುಮಕೂರು- 0816-2970310, ಚಿಕ್ಕನಾಯಕನಹಳ್ಳಿ- 08133-267457 ಕ್ಕೆ ರೈತರು ಸಂಪರ್ಕಿಸಬಹುದು.

ರೈತರು ತಾವು ಬೆಳೆದ ಹಣ್ಣು ತರಕಾರಿ ಸೇರಿದಂತೆ ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟಕ್ಕೆ ಖರೀದಿದಾರರ ಮುಖಾಂತರ ಮಾರಾಟ ಮಾಡಿಸಲಾಗುವುದು, ರೈತರಿಗೆ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಹಾಗೂ ಸಾಗಾಣೆ ಮಾಡಲು ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ತಾಲೂಕುವಾರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿದ್ದೇವೆ, ಇದರಿಂದ ರೈತರಿಗೆ ಅನುಕೂಲವಾಗುತ್ತದೆ.
-ರಘು ಬಿ., ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ತುಮಕೂರು ಜಿಲ್ಲೆ.

ತಾಲೂಕಿನಲ್ಲಿ ಯಾವುದೇ ರೈತರಿಗೆ ಮಾರುಕಟ್ಟೆ ಸಮಸ್ಯೆ ಉಂಟಾಗಿಲ್ಲ, ತೋಟಗಾರಿಕೆ ಇಲಾಖೆಯಿಂದ ಸಹಾಯವಾಣಿ ಕೇಂದ್ರ ಮಾಡಿದ್ದು, ರೈತರು ತಮಗೆ ಮಾರುಕಟ್ಟೆಯ ಅವಶ್ಯಕತೆ ಇದ್ದರೆ ಇಲಾಖೆ ಸಂಪರ್ಕ ಪಡೆದುಕೊಳ್ಳಬಹುದು.
-ಜಿತೇಶ್‌, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಚಿಕ್ಕನಾಯಕನಹಳ್ಳಿ.

Get real time updates directly on you device, subscribe now.

Comments are closed.

error: Content is protected !!