ತುಮಕೂರು: ಕೊರೊನಾ ಸೋಂಕು 2ನೇ ಅಲೆ ಗ್ರಾಮಾಂತರದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಕರ್ಫ್ಯೂಗೆ ಸೋಂಕಿತರ ಸಂಖ್ಯೆ ಇಳಿಮುಖವಾಗಬೇಕಿತ್ತು, ಆದರೆ ದಿನೇ ದಿನೆ ಹೆಚ್ಚಾಗುತ್ತಿದ್ದು ಮೃತರ ಸಂಖ್ಯೆಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,729ಕ್ಕೆ ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 461 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 52,258 ಕ್ಕೆ ಏರಿಕೆ ಕಂಡಿದೆ. 14,063 ಸಕ್ರಿಯ ಪ್ರಕರಣಗಳ ಪೈಕಿ 1,268 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 461, ಚಿನಾಹಳ್ಳಿ 11, ಗುಬ್ಬಿ 215, ಕೊರಟಗೆರೆ 222, ಕುಣಿಗಲ್ 223, ಮಧುಗಿರಿ 232, ಪಾವಗಡ 77, ಶಿರಾ 215, ತಿಪಟೂರು 18, ತುರುವೇಕೆರೆಯಲ್ಲಿ 55 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮದ ವ್ಯಕ್ತಿ (45), ತುಮಕೂರು ನಗರದ ಹನುಮಂತಪುರ ಬಡವಣೆಯ ಮಹಿಳೆ (45), ಕುಣಿಗಲ್ ತಾಲೂಕಿನ ಪುರಾಣಿಪಾಳ್ಯ ಗ್ರಾಮದ ವ್ಯಕ್ತಿ (70), ಪಾವಗಡ ತಾಲೂಕಿನ ಕುವೆಂಪು ನಗರದ ವ್ಯಕ್ತಿ (48), ಮಧುಗಿರಿ ತಾಲೂಕಿನ ಬಿಸಿ ಪಾಳ್ಯ ಗ್ರಾಮದ ವ್ಯಕ್ತಿ (53), ತುಮಕೂರು ತಾಲೂಕಿನ ದೊಡ್ಡಸಾರಂಗಿ ಗ್ರಾಮದ ವ್ಯಕ್ತಿ (38), ತುಮಕೂರು ನಗರದ ಹನುಮಂತಪುರ ಬಡವಣೆಯ ಮಹಿಳೆ (45), ಅನ್ಯಕಾರಣದಿಂದ ತುಮಕೂರಿನ ತಾಲೂಕಿನ ಸಾರಂಗಿ ಪಾಳ್ಯ ಗ್ರಾಮದ ಮಹಿಳೆ (60), ಕುಣಿಗಲ್ ನಗರ ಉಪ್ಪಾರಬೀದಿ ವಾರ್ಡ್ ನ ಮಹಿಳೆ (60), ಶಿರಾ ತಾಲೂಕಿನ ಕಾಳಿದಾಸನಗರದ ಮಹಿಳೆ (70), ಶಿರಾ ತಾಲೂಕು ಹುಲಿಕುಂಟೆ ಗ್ರಾಮದ ವ್ಯಕ್ತಿ (45), ತುಮಕೂರು ನಗರ ಚಿಕ್ಕಪೇಟೆ ಬಡವಣೆಯ ಮಹಿಳೆ (47), ತುಮಕೂರು ನರದ ಪಿ.ಹೆಚ್ ಕಾಲೋನಿಯ ವ್ಯಕ್ತಿ (62), ತುಮಕೂರು ನಗರ ಕ್ಯಾತಸಂದ್ರದ ಮಹಿಳೆ (63) ಸೇರಿಂದಂತೆ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
1,729 ಮಂದಿಗೆ ಕೊರೊನಾ: 14 ಸಾವು
Get real time updates directly on you device, subscribe now.
Next Post
Comments are closed.