ಬೋರ್‌ ಲಾರಿಯಲ್ಲಿದ್ದ ನಗದು, ಬಿಟ್ ಗಳ ಕಳ್ಳತನ

123

Get real time updates directly on you device, subscribe now.

ಕೊರಟಗೆರೆ: ತುಮಕೂರಿನ ಎವಿಎಲ್‌ ರಾಕ್‌ ಡ್ರಿಲ್ಸ್ ಬೊರ್‌ವೇಲ್‌ ವಾಹನದ ಕಾರ್ಮಿಕರಿಗೆ ಚಾಕು ತೊರಿಸಿ ಕೊಲೆ ಮಾಡುವ ಬೆದರಿಕೆಯೊಡ್ಡಿ ಲಕ್ಷಾಂತರ ರೂ. ಮೌಲ್ಯದ ಬಿಟ್ ಗಳ ಜೊತೆ 2 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಕೊರಟಗೆರೆ ಪಟ್ಟಣದ ಬೈಪಾಸ್‌, ಮಲ್ಲೇಶಪುರ ರಸ್ತೆಯ ಬಳಿ ಮಂಗಳವಾರ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಕಳ್ಳರ ತಂಡ ಕಳ್ಳತನ ಮಾಡಿದೆ, ಕಾರಿನಲ್ಲಿ ಬಂದಿದ್ದ ಮೂರು ಜನ ಕಳ್ಳರ ತಂಡ ಕೆಲಸಗಾರರಿಗೆ ಚಾಕು ತೋರಿಸಿ ಮಾತನಾಡಿದರೇ ಕೂಲೆ ಮಾಡುವ ಬೆದರಿಕೆ ಹಾಕಿದ್ದಾರೆ.
ತುಮಕೂರು ನಗರದ ಎವಿಎಲ್‌ ರಾಕ್‌ ಡ್ರಿಲ್ಸ್ ಗೆ ಸೇರಿದ ಬೋರ್‌ವೇಲ್‌ ವಾಹನದಲ್ಲಿದ್ದ ಸುಮಾರು 6 ಲಕ್ಷ ಮೌಲ್ಯದ ಡ್ರಿಲ್ಲಿಂಗ್‌ ಬಿಟ್‌ ಮತ್ತು ಸಹಾಯಕ ವಾಹನದಲ್ಲಿದ್ದ 2ಲಕ್ಷ ನಗದು ಹಣ ಕಳ್ಳತನ ಆಗಿದೆ. ಕಳ್ಳರ ತಂಡ ಕೆಲಸಗಾರರ ದ್ವಿಚಕ್ರ ವಾಹನದ ವೈರ್‌ಗಳನ್ನು ಕಡಿತಗೊಳಿಸಿ ಪರಾರಿ ಆಗಿದ್ದಾರೆ.
ವ್ಯವಸ್ಥಾಪಕ ಸುನೀಲ್ ಕುಮಾರ್‌ ಮಾತನಾಡಿ ಕಳೆದ ಎರಡು ವರ್ಷದಿಂದ ಬೈಪಾಸ್‌ ರಸ್ತೆಯಲ್ಲಿ ಈಗಾಗಲೇ ಐದಾರು ಕಳ್ಳತನ ಪ್ರಕರಣ ನಡೆದಿವೆ. ಈಗ ನಮ್ಮ ಕಾರ್ಮಿಕರಿಗೆ ಕೊಲೆ ಮಾಡುವ ಬೆದರಿಕೆ ಹಾಕಿ 6 ಲಕ್ಷ ಮೌಲ್ಯದ ಬಿಟ್‌ ಮತ್ತು 2 ಲಕ್ಷ ನಗದು ಹಣ ದೋಚಿದ್ದಾರೆ, ಬೈಪಾಸ್‌ ರಸ್ತೆಯಲ್ಲಿ ಭದ್ರತೆಯೇ ಮರೀಚಿಕೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರಿನಲ್ಲಿ ಆಗಮಿಸಿದ್ದ ಕಳ್ಳರ ತಂಡ ಸೆರೆ ಹಿಡಿಯಲು ದೂರು ನೀಡಲಾಗಿದೆ, ಕೊರಟಗೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Get real time updates directly on you device, subscribe now.

Comments are closed.

error: Content is protected !!