ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆಯಂತೆ ಲೋಕಸಭಾ ಸದಸ್ಯರ ಕಚೇರಿಯಿಂದ ಆನ್ ಲೈನ್ ಕೋವಿಡ್ ಕೇರ್ ಸೆಂಟರ್ ಅನ್ನು ಮೇ 4 ರಿಂದ ಪ್ರಾರಂಭಿಸಲಾಯಿತು.
ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರೂ ಆಗಿರುವ ಸಂಸದ ಜಿ.ಎಸ್. ಬಸವರಾಜು ಜಿಲ್ಲೆಯ 330 ಗ್ರಾಮ ಪಂಚಾಯತ್ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಜನರಿಂದ ಆನ್ ಲೈನ್ ಮೂಲಕ ದೂರು ಸ್ವೀಕರಿಸಲಿದ್ದಾರೆ. ದೂರಿಗೆ ಸಂಬಂಧಿಸಿದಂತೆ ತಕ್ಷಣ ಅಧಿಕಾರಿಗಳೊಂದಿಗೆ ಉತ್ತರ ಪಡೆದು ದೂರುದಾರರಿಗೆ ನಿಖರ ಮಾಹಿತಿ ರವಾನಿಸಲು ಕ್ರಮ ಕೈಗೊಂಡಿದ್ದಾರೆ.
ಈ ಆನ್ ಲೈನ್ ಸೇವೆ ಪಾರದರ್ಶಕವಾಗಿ ಡಿಜಿಟಲ್ ಮೂಲಕ ನಡೆಯಲಿದೆ. ಅಗತ್ಯವಿದ್ದರೆ ಯಾವುದಾದರೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವೆಬ್ ಸೈಟ್ ರಚಿಸಿ, ಡಿಜಿಟಲ್ ಚಾಟ್ ಮಾಡಲೂ ಚಿಂತನೆ ನಡೆಸಲಾಗಿದೆ. ದೂರದಾರರ ಪ್ರಶ್ನೆಗಳಿಗೆ ಅಧಿಕಾರಿಗಳು ಅಲ್ಲಿಯೇ ನೇರವಾಗಿ ಉತ್ತರ ನೀಡಬೇಕಾಗುತ್ತದೆ. ಸಂಸದರ ಕಚೇರಿಯಿಂದ ಈ ಬಗ್ಗೆ ಪರಿಶೀಲನೆಯೂ ನಡೆಯಲಿದೆ.
ಪ್ರತಿ ಆಶಾ ಕಾರ್ಯಕರ್ತರ ವ್ಯಾಪ್ತಿಯಲ್ಲಿ ಸ್ವಯಂ ಕಾರ್ಯಕರ್ತರ ತಂಡವೂ ಕಾರ್ಯನಿರ್ವಹಿಸಲಿದೆ. ಆನ್ ಲೈನ್ ಮೂಲಕ ದೂರು ನೀಡಲು ವ್ಯವಸ್ಥೆ ಇಲ್ಲದವರು ಅಥವಾ ಆನ್ ಲೈನ್ ನಲ್ಲಿಯೇ ದಾಖಲು ಮಾಡಲು ಬರದೇ ಇರುವವರು ಸ್ವಯಂ ಕಾರ್ಯಕರ್ತರ ಸಹಾಯ ಪಡೆಯಬಹುದು.
ರಾಜ್ಯ ಸರ್ಕಾರ ಜಿಲ್ಲೆಯ ಪ್ರತಿಯೊಬ್ಬರ ಅಧಿಕಾರಿ ಮತ್ತು ನೌಕರರಿಗೂ ನಿರ್ದಿಷ್ಟ ಹೊಣೆಗಾರಿಕೆ ಪಟ್ಟಿ ಮಾಡಲು ಸೂಚಿಸಿದೆ. ಸದರಿ ಅಧಿಕಾರಿ, ನೌಕರರ, ಎಲ್ಲರ ಜೊತೆಯು ಸಂಸದರ ಕಚೇರಿಯ ಆನ್ ಲೈನ್ ಕೋವಿಡ್ ಕೇರ್ ಸೆಂಟರ್ ನಿಕಟ ಸಂಪರ್ಕದಲ್ಲಿ ದಿನದ 24 ಗಂಟೆಯೂ ಇರಲಿದೆ.
ಡಿಜಿಟಲ್ ದೂರುದಾರರು- ಆಪ್ತ ಸಹಾಯಕರು, ಸಂಸದರ ಕಚೇರಿ, ವಾಟ್ಸ್ಆಪ್ ನಂಬರ್ 9980016157, 8310902497, 9739129842, 9448079192 ಅನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು.
ಕೋವಿಡ್ ವಿಚಾರವಾಗಿ ಚರ್ಚಿಸಲು ಮೇ 5 ರಂದು ದಿಶಾ ಸಮಿತಿ ಸಭೆ ಕರೆಯಲಾಗಿದೆ. ಹಾಗಾಗಿ ಪರಿಣಿತರು ಮತ್ತು ಸಾರ್ವಜನಿಕರು ಕೋವಿಡ್ ಬಗ್ಗೆ ಸಲಹೆಗಳನ್ನು ಮೇಲ್ಕಂಡ ವಾಟ್ಸ್ಆಪ್ ನಂಬರ್ ಗಳಿಗೆ ನೀಡಬಹುದು ಎಂದು ಸಂಸದರ ಕಚೇರಿ ತಿಳಿಸಿದೆ.
ಆನ್ ಲೈನ್ ಕೋವಿಡ್ ಕೇರ್ ಸೆಂಟರ್
Get real time updates directly on you device, subscribe now.
Next Post
Comments are closed.