ರಾತ್ರಿ ವೇಳೆ ಡಾಬಾಗಳ ದರ್ಬಾರ್

624

Get real time updates directly on you device, subscribe now.

ಮಧುಗಿರಿ: ಗ್ರಾಮೀಣ ಭಾಗದಲ್ಲಿ ಕೊರೊನಾ ವೇಗವಾಗಿ ಹರಡುತ್ತದ್ದಿರೂ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಅನಧಿಕೃತ ಡಾಬಾಗಳು ನಡೆಯುತ್ತಿದ್ದು, ಕೊರೊನಾ ಹರಡಿಸುವ ತಾಣಗಳಾಗಿವೆ.
ತಾಲೂಕಿನ ಪುರವರ ಹೋಬಳಿಯ ಪೂಜಾರಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆಯದೆ ಗ್ರಾಮದಲ್ಲಿ ಅಕ್ರಮವಾಗಿ ಡಾಬಾ ನಡೆಸುತಿದ್ದ ಆಟೋ ಗೋವಿಂದಪ್ಪ ಎಂಬ ವ್ತಕ್ತಿಯನ್ನು ರಾತ್ರಿ ವೇಳೆ ಹೀಗೆ ಡಾಬ ನಡೆಸುವುದು ತಪ್ಪು ಎಂದು ಸಾರ್ವಜನಿಕರು ವಿಚಾರಿಸಿದಾಗ ಅವರ ಮೊಬೈಲ್ ಕಸಿದು ಅವರ ಮೇಲೆ ಗೋವಿಂದಪ್ಪ ಮತ್ತು ಅವರ ಮಗ ಲಿಂಗರಾಜು ಹಲ್ಲೆಗೆ ಮುಂದಾಗಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!