ಪುರಸಭೆ ಅಧಿಕಾರಿಗಳಿಂದ ಅಂತ್ಯಸಂಸ್ಕಾರ- ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

ಸಂಬಂಧಿಕರು ಬಾರದೆ ಅನಾಥವಾದ ಶವ

546

Get real time updates directly on you device, subscribe now.

ಮಧುಗಿರಿ: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಬಾರದ ಕಾರಣ ಅನಾಥ ಶವದ ರೀತಿಯಲ್ಲಿ ಅಂತ್ಯಸಂಸ್ಕಾರ ಮಾಡುವ ಮೂಲಕ ಮಧುಗಿರಿ ಪುರಸಭೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದ ಸರೋಜಮ್ಮ ಎಂಬ ವೃದ್ಧೆಯೊಬ್ಬರು ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದರು. ಅವರ ಮಗನಿಗೂ ಸೋಂಕು ತಗುಲಿದ್ದು ಆತನೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೃತ ವೃದ್ಧೆಯ ಸಂಬಂಧಿಕರು ಯಾರು ಅಂತ್ಯಕ್ರಿಯೆ ನಡೆಸಲು ಮುಂದೆ ಬಾರದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್‌, ಹಿರಿಯ ಆರೋಗ್ಯ ನಿರೀಕ್ಷಕ ಬಾಲಾಜಿ, ಕಿರಿಯ ಅಭಿಯಂತರ ಸಂಜೀವ್‌ ಮೂರ್ತಿ ನೇತೃತ್ವದಲ್ಲಿ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಮೃತ ವೃದ್ಧೆಯ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ.
ಸಿಬ್ಬಂದಿ ಆರ್‌.ಮಂಜುನಾಥ್‌, ತೌಸಿಫ್‌, ಕೆ.ರವಿಕುಮಾರ್‌, ವಿ.ವೆಂಕಟರಮಣ, ಮುನಿರಾಜು, ಸಾಧಿಕ್‌ ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!