ತುಮಕೂರು: ಕೊರೊನಾ ಸೋಂಕು 2ನೇ ಅಲೆ ಮಿತಿ ಮೀರುತ್ತಿದೆ. ಬುಧವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,221ಕ್ಕೆ ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 461 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 54,479 ಕ್ಕೆ ಏರಿಕೆ ಕಂಡಿದೆ. 14,781 ಸಕ್ರಿಯ ಪ್ರಕರಣಗಳ ಪೈಕಿ 1,490 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 461, ಚಿನಾಹಳ್ಳಿ 163, ಗುಬ್ಬಿ 416, ಕೊರಟಗೆರೆ 137, ಕುಣಿಗಲ್ 160, ಮಧುಗಿರಿ 231, ಪಾವಗಡ 140, ಶಿರಾ 226, ತಿಪಟೂರು 164, ತುರುವೇಕೆರೆಯಲ್ಲಿ 123 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ವ್ಯಕ್ತಿ (48), ತುಮಕೂರು ತಾಲೂಕಿನ ಭೀಮಸಂದ್ರ ಬಡಾವಣೆಯ ವ್ಯಕ್ತಿ (47), ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ ಮಹಿಳೆ (40), ತುಮಕೂರು ತಾಲೂಕಿನ ಗೂಳೂರು ಗ್ರಾಮದ ವ್ಯಕ್ತಿ (50), ತುಮಕೂರು ತಾಲೂಕಿನ ಕದರನಹಳ್ಳಿ ಗ್ರಾಮದ ವ್ಯಕ್ತಿ (54),ಅನ್ಯಕಾರಣದಿಂದ ತುಮಕೂರು ನಗರದ ಕೃಷ್ಣ ನಗರದ ವ್ಯಕ್ತಿ (76), ತುಮಕೂರು ತಾಲೂಕಿನ ಕ್ಯಾತಸಂದ್ರದ ವ್ಯಕ್ತಿ (36), ಶಿರಾ ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದ ಮಹಿಳೆ (65), ಶಿರಾ ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ವ್ಯಕ್ತಿ (71), ಮಧುಗಿರಿ ತಾಲೂಕಿನ ಮಧುಗಿರಿ ನಗರದ ವ್ಯಕ್ತಿ (84), ಶಿರಾ ತಾಲೂಕಿನ ಉಮಾಪತಿ ಹಳ್ಳಿ ಗ್ರಾಮದ ಮಹಿಳೆ (65), ತುಮಕೂರು ನಗರ ಪಿ.ಜಿ ಲೇಔಟ್ ನ ವ್ಯಕ್ತಿ (40), ತುಮಕೂರು ನಗರ ಹನುಮಂತಪುರ ಬಡಾವಣೆಯ ವ್ಯಕ್ತಿ (65) ಒಟ್ಟು13 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Get real time updates directly on you device, subscribe now.
Comments are closed.