ಕುಣಿಗಲ್‌ ಪೊಲೀಸರ ಕ್ರಮಕ್ಕೆ ಸೋಮಣ್ಣ ಶ್ಲಾಘನೆ

182

Get real time updates directly on you device, subscribe now.

ಕುಣಿಗಲ್‌: ಕೊವಿಡ್‌ ನಿಯಂತ್ರಣ ನಿಟ್ಟಿನಲ್ಲಿ ಕುಣಿಗಲ್‌ ಪಟ್ಟಣದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ವಸತಿ ಸಚಿವ ವಿ.ಸೋಮಣ್ಣ ಶ್ಲಾಘಿಸಿದರು.
ಗುರುವಾರ ಬೆಳಗ್ಗೆ ಕೊಡಗು ಜಿಲ್ಲೆಗೆ ಹೋಗುವ ಮಾರ್ಗ ಮಧ್ಯೆ ಪಟ್ಟಣಕ್ಕೆ ಭೇಟಿ ನೀಡಿದ ಸಚಿವರು ಉಪಹಾರ ಸ್ವೀಕರಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ರಮೇಶ್‌, ಸಿಪಿಐ ಡಿ.ಎಲ್‌.ರಾಜು ಅವರೊಂದಿಗೆ ಕೊವಿಡ್‌ ಸ್ಥಿತಿಗತಿಯ ಮಾಹಿತಿ ಪಡೆದರು. ಪಟ್ಟಣದ ಹೃದಯ ಭಾಗದಲ್ಲಿನ ರಸ್ತೆ ಮಧ್ಯದಲ್ಲಿ ಸುಮಾರು ಮೂರು ಕಿ.ಮೀ ವರೆಗೂ ಠಾಣೆಯನ್ನು ಕೇಂದ್ರೀಕರಿಸಿಕೊಂಡು ಮೈಕ್‌ ಕಟ್ಟಿಸಿ ಜನತೆಗೆ ಕೊವಿಡ್‌ ಬಗ್ಗೆ ಜಾಗೃತಿ, ಕರ್ಫ್ಯೂ ಬಗ್ಗೆ ಅಗತ್ಯ ಪ್ರಚಾರ ನೀಡಲು ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದರು. ಸರ್ಕಾರ ಸಹ ಕೊವಿಡ್‌ ನಿಯಂತ್ರಣಕ್ಕೆ ಮೊದಲ ಆದ್ಯತೆಯಲ್ಲಿ ಶ್ರಮಿಸುತ್ತಿದ್ದು ಜನರು ಸಹಕಾರ ನೀಡಬೇಕಿದೆ. ಕೊವಿಡ್‌ ವಿಷಯದಲ್ಲೂ ಕೆಲವರು ರಾಜಕಾರಣ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಜನತೆ ಕಷ್ಟದಲ್ಲಿರುವಾಗ ಅವರ ಕಷ್ಟ ನಿವಾರಣೆ ಮೊದಲ ಆದ್ಯತೆಯಾಗಬೇಕು, ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪನವರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು. ಪುರಸಭೆ ಸದಸ್ಯ ಕೃಷ್ಣ, ಮುಖಂಡ ಬಾಬುರಾವ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!