ಕೊರೊನಾ ಬಗ್ಗೆ ಭಯ ಬೇಡ ಎಚ್ಚರವಿರಲಿ

184

Get real time updates directly on you device, subscribe now.

ಮಧುಗಿರಿ: ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಿ ಕಂಡು ಬಂದಿದ್ದು, ಹೋಂ ಐಸೊಲೇಷನ್‌ ನಲ್ಲಿರುವ ಸೋಂಕಿತರ ಮನೆಗಳಿಗೆ ಗ್ರಾಪಂ ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿ ಕೊರೊನಾ ಬಗ್ಗೆ ಭಯಬೇಡ ಎಚ್ಚರವಿರಲಿ, ಪಾಸಿಟಿವ್‌ ಬಂದ ವ್ಯಕ್ತಿಗಳು ಪಾಸಿಟಿವ್‌ ಆಗಿಯೇ ಯೋಚಿಸಿ ನಕಾರಾತ್ಮಕ ಆಲೋಚನೆಗಳನ್ನು ಮಾಡಬೇಡಿ, ಮನೆಯಿಂದ ಹೊರಗೆ ಬರದಂತೆ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್‌ ಬಳಸುವಂತೆ ತಿಳುವಳಿಕೆ ಮೂಡಿಸಲಾಯಿತು.
ನಂತರ ಮಿಡಿಗೇಶಿ ಪೊಲೀಸ್‌ ಠಾಣೆಯಲ್ಲಿ ಡಿ ಗ್ರೂಪ್‌ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಪೊಲೀಸ್‌ ಠಾಣೆಗೂ ಸ್ಯಾನಿಟೈಸ್‌ ಮಾಡಿಸಲಾಯಿತು, ಬಸ್‌ ನಿಲ್ದಾಣ ಹಾಗೂ ಸೋಂಕಿತರ ಮನೆಯ ಸುತ್ತಮುತ್ತ ಸೇರಿದಂತೆ ಮಿಡಿಗೇಶಿ ಗ್ರಾಮದಲ್ಲಿ ಸ್ಯಾನಿಟೈಸ್‌ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಪಿಡಿಒ ಜುಂಜೇಗೌಡ, ಅಧ್ಯಕ್ಷರಾದ ಪ್ರೇಮಲತಾ ರವಿಕುಮಾರ್‌, ಉಪಾಧ್ಯಕ್ಷ ಸುರೇಶ್‌, ಸದಸ್ಯರಾದ ರಾಜ್‌ ಗೋಪಾಲ್‌, ರಾಧಾ ಬಾಬುಕುಮಾರ್‌, ಸಿಬ್ಬಂದಿ ವರ್ಗ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!