1,765 ಮಂದಿಗೆ ಕೋವಿಡ್: ಮತ್ತೆ 12 ಸಾವು

278

Get real time updates directly on you device, subscribe now.

ತುಮಕೂರು: ಕೊರೊನಾ ಸೋಂಕು ಮಿತಿ ಮೀರುತ್ತಿದೆ. ಗುರುವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,765 ಕ್ಕೆ ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 809 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 56,244 ಕ್ಕೆ ಏರಿಕೆ ಕಂಡಿದೆ. 15,393 ಸಕ್ರಿಯ ಪ್ರಕರಣಗಳ ಪೈಕಿ 1,141 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 809, ಚಿನಾಹಳ್ಳಿ 51, ಗುಬ್ಬಿ 50, ಕೊರಟಗೆರೆ 44, ಕುಣಿಗಲ್ 186, ಮಧುಗಿರಿ 156, ಪಾವಗಡ 83, ಶಿರಾ 320, ತಿಪಟೂರು 9, ತುರುವೇಕೆರೆಯಲ್ಲಿ 57 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ಪಾವಗಡ ತಾಲೂಕಿನ ಮೇಗಲಪಾಳ್ಯ ಗ್ರಾಮದ ವ್ಯಕ್ತಿ (32), ತುಮಕೂರು ನಗರದ ಶೆಟ್ಟಿಹಳ್ಳಿ ಬಡಾವಣೆಯ ಬಾಲಕ (14), ತುಮಕೂರು ತಾಲೂಕಿನ ಬಿದರಕಟ್ಟೆ ಗ್ರಾಮದ ವ್ಯಕ್ತಿ (70), ಕೊರಟಗೆರೆ ತಾಲೂಕಿನ ಕೊರಟಗೆರೆ ನಗರದ ಮಹಿಳೆ (60), ತಿಪಟೂರು ನಗರದ ಕೆ.ಆರ್ ಬಡವಣೆಯ ವ್ಯಕ್ತಿ (54), ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದ ಮಹಿಳೆ (35) ಅನ್ಯಕಾರಣದಿಂದ ತುಮಕೂರು ನಗರ ಜಯನಗರದ ಮಹಿಳೆ (66), ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದ ವ್ಯಕ್ತಿ (56), ಶಿರಾ ತಾಲೂಕಿನ ಬರಗೂರು ಗ್ರಾಮದ ಮಹಿಳೆ (70), ಗುಬ್ಬಿ ತಾಲೂಕಿನ ನಗರದ ವ್ಯಕ್ತಿ (80), ತುಮಕೂರು ನಗದ ಸದಾಶಿವ ನಗರದ ಮಹಿಳೆ (58), ತುಮಕೂರು ತಾಲೂಕಿನ ಕೋತ್ತಿಹಳ್ಳಿ ಗ್ರಾಮದ ವ್ಯಕ್ತಿ (55) ಒಟ್ಟು12 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!