
ಗುಬ್ಬಿ: ರಾಷ್ಟ್ರಾದ್ಯಾಂತ ಸದ್ದು ಮಾಡುತ್ತಿರುವ ಹನಿ ಟ್ರಾಪ್ ವಿಚಾರಕ್ಕೆ ತಾರ್ಕಿಕ ಅಂತ್ಯ ಸಿಗಬೇಕು, ವೈಯಕ್ತಿಕ ಜೀವನದ ತೇಜೋವಧೆ ಆಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೈತರಿಗೆ ಪಂಪು, ಮೋಟಾರ್ ವಿತರಣೆ ಮಾಡಿ ಮಾತನಾಡಿ, ಯಾರೇ ಇಂತಹ ಕೃತ್ಯ ಎಸುಗುತ್ತಾರೋ ಅಂತವರಿಗೆ ಕಾನೂನು ಶಿಕ್ಷೆ ಆಗಬೇಕಾಗಿದೆ ಎಂದ ಅವರು ಎರಡು ವರ್ಷಗಳ ಕಾಲ ನಮ್ಮ ಸರ್ಕಾರ ಸಹ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳನ್ನು ಯಾವುದು ಯೋಜನೆಗಳಲ್ಲಿ ನೀಡಲು ಸಾಧ್ಯವಾಗಿರಲಿಲ್ಲ, ಈಗ ಬಜೆಟ್ ನಂತರ ಮನೆಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ, ಇನ್ನು ಹಾಲಿನ ದರ ಐದು ರೂಪಾಯಿ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಿದ್ದು ಆ ಹಣದಲ್ಲಿ ಹೆಚ್ಚಿನದಾಗಿ ರೈತರಿಗೆ ಸೇರುತ್ತದೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಯೋಜನೆಯಿಂದ 43 ರೈತರಿಗೆ ಪಂಪು ಮೋಟಾರು ನೀಡಿದ್ದು, ಎಲ್ಲಾ ಕೊಳವೆ ಭಾಗಗಳಲ್ಲೂ ಉತ್ತಮ ನೀರು ಬಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ವಿನಯ್ ಸೇರಿದಂತೆ ಇನ್ನಿತರೇ ಅಧಿಕಾರಿಗಳು, ರೈತರು ಹಾಜರಿದ್ದರು.