ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಕೆಬ್ಬೇಪಾಳ್ಯದ ಸಿದ್ದರಾಜು ಅವರ ಮಗಳು ಈಶ್ವರಿ.ಕೆ.ಎಸ್. (17) ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಈಶ್ವರಿ.ಕೆ.ಎಸ್ ಮತ್ತು ಆಕೆಯ ತಂಗಿ ಸಿಂಧು ಇಬ್ಬರೂ ಬೆಳಗ್ಗೆ ತೋಟಕ್ಕೆ ಮೇವು ತರಲು ಹೋಗಿದ್ದರು, ಆ ವೇಳೆ ಕೊಳವೆಬಾವಿಯ ವಿದ್ಯುತ್ ಕೇಬಲ್ ಈಶ್ವರಿಗೆ ತಗುಲಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ದಂಡಿನಶಿವರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಶಾಕ್- ಬಾಲಕಿ ಸಾವು
Get real time updates directly on you device, subscribe now.
Prev Post
Next Post
Comments are closed.