ಬಿಜೆಪಿ ವರಿಷ್ಠರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್

ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ

458

Get real time updates directly on you device, subscribe now.

ಕುಣಿಗಲ್‌: ತಾಲೂಕು ಬಿಜೆಪಿ ವರಿಷ್ಠರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ, ಕೈಕೈ ಮಿಲಾಯಿಸುವ ಘಟನೆ ನಡೆದು ಪ್ರಕರಣ ಠಾಣೆ ಮೆಟ್ಟಿಲೇರಿದೆ.
ಬಿಜೆಪಿ, ಕಾಂಗ್ರೆಸ್ ನ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಹೆಸರಿನ ಖಾತೆ ಹೊಂದಿದ್ದು, ಇತ್ತೀಚಿನ ಕೆಲ ವಿದ್ಯಾಮಾನಗಳ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ತಾಲೂಕು ಬಿಜೆಪಿ ವರಿಷ್ಠರ ಬಗ್ಗೆ ಪೋಸ್ಟ್ ಹಾಕಿದ್ದ, ಇದಕ್ಕೆ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನ ಕಾರ್ಯಕರ್ತನೋರ್ವ ಬಿಜೆಪಿ ವರಿಷ್ಠರ ಕುಟುಂಬದ ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಹಾಕಿದ್ದ, ಇದನ್ನು ಖಂಡಿಸಿದ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಾರ್ವಜನಿಕ ಆಸ್ಪತ್ರೆ ಬಳಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಾಗ ವಾದ ವಿವಾದ ನಡೆದು ಕೈಕೈ ಮಿಲಾಯಿಸಿ, ಕೈ ಕಾರ್ಯಕರ್ತ ಗೌಡನನ್ನು ಪೊಲೀಸ್‌ ಠಾಣೆಗೆ ಕರೆ ತಂದರು.
ಈ ಹಂತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೂ ಬಿಜೆಪಿ ಕಾರ್ಯಕರ್ತರಿಗೂ ಠಾಣೆ ಮುಂದೆಯೆ ಜಟಾಪಟಿ ನಡೆಯಿತು. ಪೊಲೀಸರು ಎರಡೂ ಕಡೆಯವರನ್ನು ಹೊರಗೆ ಕಳಿಸಿ ಗೌಡ ಎಂಬಾತನನ್ನು ವಶಕ್ಕೆ ಪಡೆದರೆ, ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಚಂದ್ರು ಸಹ ಪ್ರತಿ ದೂರು ನೀಡಿದ ಮೇರೆಗೆ ದಿಲೀಪ್‌ ಎಂಬಾತನನ್ನು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್‌, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅಭಿವೃದ್ಧಿ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯಲಿ, ಅದು ಬಿಟ್ಟು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ವೈಯಕ್ತಿಕವಾಗಿ ಕುಟುಂಬಗಳ, ಮಹಿಳೆಯರ ವಿಷಯನ್ನು ಎಳೆದು ತರುವುದು ಯಾರಿಗೂ ಶೋಭೆ ತರುವುದಿಲ್ಲ, ಮುಂದಿನ ದಿನಗಳಲ್ಲಿ ಇಂತಹ ಪ್ರವೃತ್ತಿ ಯಾವ ಪಕ್ಷದವರು ನಡೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್‌ ಮುಖಂಡ ಚಂದ್ರು ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರು ಅಸಭ್ಯದಿಂದ ನಡೆದುಕೊಂಡಿಲ್ಲ, ಅವರು ಸಹ ಸಭ್ಯತೆ ಮೀರಿ ನಡೆದುಕೊಂಡಿದ್ದಾರೆ, ಪಕ್ಷ ಯಾವುದೇ ಇರಲಿ, ಸಭ್ಯತೆಯಿಂದ ನಡೆದುಕೊಂಡಾಗ ಇಂತಹ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ನಡೆದ ವಿದ್ಯಾಮಾನಗಳನ್ನೆಲ್ಲಾ ಶಾಸಕರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!