ಚಿಕಿತ್ಸೆಗೆ ಒತ್ತಾಯಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆ

567

Get real time updates directly on you device, subscribe now.

ಕುಣಿಗಲ್‌: ಕೊವಿಡ್‌ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗೆ ಸಮರ್ಪಕ ಚಿಕಿತ್ಸೆ ನೀಡದ ಕಾರಣ ಆಸ್ಪತ್ರೆ ಮುಖ್ಯಬಾಗಿಲಲ್ಲಿ ಮಲಗಿ ಪ್ರತಿಭಟಿಸಿದ ಘಟನೆ ನಡೆಯಿತು.
ಪಟ್ಟಣದಲ್ಲಿ ಕೊವಿಡ್‌ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಗುರುವಾರ ಸಂಜೆ ವಕೀಲ ಗಂಗಾಧರ ಕರೆತಂದಿದ್ದರು. ಶುಕ್ರವಾರ ಬೆಳಗ್ಗೆಯಾದರೂ ಯಾರೊಬ್ಬರು ತಪಾಸಣೆ ಮಾಡದ ಕಾರಣ ಅಸಮಾಧಾನ ವ್ಯಕ್ತಪಡಿಸಿದರು. ಸೋಂಕಿತ ಆಸ್ಪತ್ರೆ ವ್ಯವಸ್ಥೆ ಖಂಡಿಸಿ ಆಸ್ಪತ್ರೆ ಮುಖ್ಯದ್ವಾರದ ಬಾಗಿಲಲ್ಲೆ ಮಲಗಿ ಪ್ರತಿಭಟಿಸಲು ಮುಂದಾದರು. ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ 50 ಬೆಡ್‌ ಅವಕಾಶ ಇದ್ದರೂ 72 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯ ಸೌಲಭ್ಯ ಇಲ್ಲದೆ ಚಿಕಿತ್ಸೆ ನೀಡುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಶಾಸಕರ ಆಪ್ತ ಸಹಾಯಕರನ್ನು ಕಾಣಿ ಎಂದಾಗ ಸಿಡಿಮಿಡಿಗೊಂಡ ಗಂಗಾಧರ್‌, ಆಸ್ಪತ್ರೆಗೆ ಬಂದ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು, ಇದಕ್ಕೆ ಶಾಸಕರ ಆಪ್ತನನ್ನು ಏಕೆ ಕಾಣಬೇಕು, ಇಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದರು.
ಆಸ್ಪತ್ರೆಯ ವೈದ್ಯರು ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ರಮೆಶ್‌ ಸಮಸ್ಯೆ ಆಲಿಸಿ ವೈದ್ಯರ ಮನವೊಲಿಸಿ ಚಿಕಿತ್ಸೆಗೆ ಸೋಂಕಿತನನ್ನು ದಾಖಲಿಸಿಕೊಳ್ಳಲು ವ್ಯವಸ್ಥೆ ಮಾಡಿದರು.

Get real time updates directly on you device, subscribe now.

Comments are closed.

error: Content is protected !!