ತುಮಕೂರು: ಶುಕ್ರವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 2,797 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 755 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 59,041 ಕ್ಕೆ ಏರಿಕೆ ಕಂಡಿದೆ. 18,176 ಸಕ್ರಿಯ ಪ್ರಕರಣಗಳ ಪೈಕಿ 1,200 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 755, ಚಿನಾಹಳ್ಳಿ 236, ಗುಬ್ಬಿ 353, ಕೊರಟಗೆರೆ 225, ಕುಣಿಗಲ್ 138, ಮಧುಗಿರಿ 189, ಪಾವಗಡ 99, ಶಿರಾ 202, ತಿಪಟೂರು 335, ತುರುವೇಕೆರೆಯಲ್ಲಿ 265 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ನಿಂದ ತುಮಕೂರು ತಾಲೂಕಿನ ಬಡ್ಡಿಹಳ್ಳಿ ಬಡಾವಣೆಯ ಮಹಿಳೆ (25), ತುಮಕೂರು ನಗರ ಮಾರುತಿ ನಗರದ ವ್ಯಕ್ತಿ (65), ಕುಣಿಗಲ್ ತಾಲೂಕಿನ ಶೆಟ್ಟಿಗೆಹಳ್ಳಿ ಗ್ರಾಮದ ವ್ಯಕ್ತಿ (30), ತುಮಕೂರು ನಗರದ ವಿನೋಬ ನಗರದ ಮಹಿಳೆ (35), ತಿಪಟೂರು ನಗರದ ವ್ಯಕ್ತಿ (66), ತುಮಕೂರು ನಗರ ಮರಳೂರು ದಿಣ್ಣೆ (37), ತುರುವೇಕೆರೆ ತಾಲೂಕಿನ ಮೆಲೆನ ವರಗೆರೆಹಳ್ಳಿ ಗ್ರಾಮದ ವ್ಯಕ್ತಿ (40),ಅನ್ಯಕಾರಣದಿಂದ ತುಮಕೂರು ನಗರದ ವ್ಯಕ್ತಿ (63), ತುಮಕೂರು ತಾಲೂಕಿನ ಕೊಟ್ಟನಹಳ್ಳಿ ಗ್ರಾಮದ ವ್ಯಕ್ತಿ (48), ಪಾವಗಡ ತಾಲೂಕಿನ ಕೃಷ್ಣಗಿರಿ ಗ್ರಾಮದ ವ್ಯಕ್ತಿ (65), ಗುಬ್ಬಿ ತಾಲೂಕಿನ ಕೊಂಡ್ಲಿ ಗ್ರಾಮದ ವ್ಯಕ್ತಿ (54), ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದ ಮಹಿಳೆ (62), ತುಮಕೂರು ನಗರದ ವ್ಯಕ್ತಿ (65), ತುರುವೇಕೆರೆ ತಾಲೂಕಿನ ಗಿಡ್ಡನಪಾಳ್ಯ ಗ್ರಾಮದ ವ್ಯಕ್ತಿ (37) ಒಟ್ಟು14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
2,797 ಮಂದಿಗೆ ಕೋವಿಡ್: 14 ಸಾವು
Get real time updates directly on you device, subscribe now.
Prev Post
Comments are closed.