ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿನ ನೀರಿನ ಸಮಸ್ಯೆ ಹಾಗೂ ಕುಡಿಯುವ ನೀರಿನ ಘಟಕಗಳ ದುರಸ್ತಿಯ ಬಗ್ಗೆ ಪುರಸಭೆ ಇಂಜಿನಿಯರಿಗೆ ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಡಿವೈಎಸ್ಪಿ ರವೀಶ್.
ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದ ನಿರ್ವಹಣೆ ಇಲ್ಲದೆ ಜನರು ದಿನನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಹಾಗೂ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕರೋನಾ ಸಮಯದಲ್ಲೂ ಜನರು ಬೀದಿ ಬೀದಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಇದರ ಬಗ್ಗೆ ತುಮಕೂರು ವಾರ್ತೆ ಗೆಯಲ್ಲಿ ಸುದ್ದಿ ಪ್ರಸಾರವಾದ ಹಿನ್ನಲೆಯಲ್ಲಿ ಸುದ್ದಿ ಗಮನಿಸಿದ dy.sp ರವೀಶ ರವರು ಕೂಡಲೇ ಪುರಸಭಾ ಇಂಜಿನಿಯರ್ ಬಾಬು ರವರಿಗೆ ಕರೆ ಮಾಡಿ ಚಿಕ್ಕನಾಯಕನಹಳ್ಳಿ ಪಟ್ಟಣದ ಜನರು ನೀರಿಗಾಗಿ ಪರಿತಪಿಸುತ್ತಿರುವುದ ನೋವಾಗುವಂತಹ ವಿಷಯ ನೀವೆಲ್ಲಾ ಏನು ಮಾಡುತ್ತಿದ್ದೀರಾ. ಪಟ್ಟಣದ ಜನತೆಗೆ ಸರಿಯಾದ ಸಮಯಕ್ಕೆ ನೀರು ನೀಡದಿರುವುದು ನಿಮ್ಮ ಬೇಜವಾಬ್ದಾರಿತನ, ಪುರಸಭೆ ಅಧಿಕಾರಿಗಳ ಹೊಂದಾಣಿಕೆಯ ಕೊರತೆ ಎಂಬುದು ಎದ್ದು ಕಾಣುತ್ತದೆ. ಮೊದಲು ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ತಾಕೀತು ಮಾಡಿದರು.
ಇಂಜಿನಿಯರಿಗೆ ತರಾಟೆಗೆ ತೆಗೆದುಕೊಂಡ: ಡಿವೈಎಸ್ಪಿ ರವೀಶ್
Get real time updates directly on you device, subscribe now.
Prev Post
Comments are closed.