ಕೋವಿಡ್‌ ಸೋಂಕಿತರನ್ನು ಕೇರ್‌ ಸೆಂಟರ್ ಗೆ ಸ್ಥಳಾಂತರಿಸಿ: ಸಚಿವ

117

Get real time updates directly on you device, subscribe now.

ತಿಪಟೂರು: ದಿನೇ ದಿನೆ ಹೆಚ್ಚುತ್ತಿರುವ ಕೋವಿಡ್ ನ್ನು ತಹಬದಿಗೆ ತರಲು ಸೋಂಕಿತರನ್ನು ಹೋಮ್‌ ಐಸೋಲೇಷನ್‌ ಮಾಡದೆ ಶೀಘ್ರವಾಗಿ ಕೋವಿಡ್‌ ಕೇರ್‌ ಸೆಂಟರ್ ಗಳಿಗೆ ಸ್ಥಳಾಂತರಿಸಿ ಎಂದು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಮಿನಿ ವಿಧಾನಸೌಧದಲ್ಲಿ ಕೋವಿಡ್‌ ನಿಯಂತ್ರಣ ಸಭೆಯಲ್ಲಿ ಮಾತನಾಡಿ, ಕೋವಿಡ್‌ ನಿಯಂತ್ರಣ ಮಾಡಬೇಕಾದರೆ ಸೋಂಕಿತರು ಪತ್ತೆಯಾದ ತಕ್ಷಣ ಅವರನ್ನು ಕೊವಿಡ್‌ ಕೇರ್‌ ಸೆಂಟರ್ ಗೆ ಸ್ಥಳಾಂತರಿಸಿ ಕೋವಿಡ್‌ ಸರಪಳಿ ತುಂಡರಿಸಬೇಕು, ಇಲ್ಲದೆ ಹೋದರೆ ಹೋಂ ಐಸೋಲೇಷನ್‌ ನೆಪದಲ್ಲಿ ಎಲ್ಲರಿಗೂ ಹಂಚುತ್ತಾರೆ, ಇದರಿಂದಲೆ ಹೆಚ್ಚು ಹೆಚ್ಚು ಪ್ರಕರಣ ಪತ್ತೆಯಾಗುತ್ತಿವೆ ಮತ್ತು ಅತಿ ಹೆಚ್ಚು ಸಮಸ್ಯೆ ಕಾಣಿಸಿದಾಗ ಆಸ್ಪತ್ರೆಗೆ ದೌಡಾಯಿಸುತ್ತಾರೆ, ಇದರಿಂದ ಪರಿಸ್ಥಿತಿ ಗಂಭೀರವಾಗುತ್ತದೆ, ಆದ್ದರಿಂದಲೆ ಸೋಂಕಿತರನ್ನು ತಕ್ಷಣವೇ ಕೋವಿಡ್‌ ಕೇರ್‌ ಸೆಂಟರ್ ಗೆ ಸ್ಥಳಾಂತರಿಸಿದರೆ ಅವರು ನಮ್ಮ ವೀಕ್ಷಣೆಯಲ್ಲಿಯೇ ಇರುವುದರಿಂದ ಮತ್ತು ಔಷಧಿಯನ್ನು ಕಾಲಕಾಲಕ್ಕೆ ನೀಡುವುದರಿಂದ ಮರಣ ಪ್ರಮಾಣ ತಪ್ಪಿಸುವುದಲ್ಲದೆ ಕೋವಿಡ್‌ ಗುಣಪಡಿಸಲು ಸಾಧ್ಯವಾಗುತ್ತದೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಎಸ್ಪಿ ಡಾ.ವಂಶಿಕೃಷ್ಣ, ಜಿಪಂ ಸಿಇಓ ಉಪ ವಿಭಾಗಾಧಿಕಾರಿ ದಿಗ್ವಿಜಯ್‌ ಬೋಡ್ಕೆ, ತಹಸೀಲ್ದಾರ್‌ ಚಂದ್ರಶೇಖರ್‌, ಟಿ ಹೆಚ್ ಓ ರವಿಕುಮಾರ್‌, ವೈದ್ಯಾಧಿಕಾರಿ ಪ್ರಹ್ಲಾದ್‌ ಮತ್ತಿತತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!