ಡಾ.ಜಿ.ಪರಮೇಶ್ವರ ಗೆಳೆಯರ ಬಳಗದಿಂದ ಸಮಾಜಸೇವೆ

500 ಜನರಿಗೆ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆ

185

Get real time updates directly on you device, subscribe now.

ಕೊರಟಗೆರೆ: ಕೊರೊನಾ ರೋಗದ ಎರಡನೇ ಅಲೆಗೆ ವಿಶ್ವವೇ ನಲುಗಿ ಭಾರತ ದೇಶದ ಜನರ ಜೀವನ ಈಗಾಗಲೇ ನಲುಗಿದೆ, ಕರ್ನಾಟಕ ಸರಕಾರ ಜಾರಿ ಮಾಡಿರುವ ಜನತಾ ಕರ್ಪ್ಯೂನಿಂದ ಖಾಸಗಿ ಹೊಟೇಲ್ ಗಳೆಲ್ಲ ಸಂಪೂರ್ಣವಾಗಿ ಮುಚ್ಚಿವೆ. ಡಾ.ಜಿ.ಪರಮೇಶ್ವರ ಗೆಳೆಯರ ಬಳಗದ ನೇತೃತ್ವದಲ್ಲಿ ಕೊರಟಗೆರೆಯ ಸ್ನೇಹಜೀವಿ ಎಂ ಎನ್ ಜೆ ಮಂಜುನಾಥ ಮತ್ತೊಂದು ಸಮಾಜಸೇವೆಗೆ ಮುಂದಾಗಿ ಉಚಿತ ದಾಸೋಹ ವ್ಯವಸ್ಥೆ ಪ್ರಾರಂಭ ಮಾಡಿದ್ದಾರೆ.
ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಸಲಹೆಯಂತೆ ಗೆಳೆಯರ ಬಳಗದ ಯುವಕ ಮಿತ್ರರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್‌, ಮಾರುತಿ ಆಸ್ಪತ್ರೆ, ರೇಣುಕಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ಗ್ರಾಮೀಣ ಪ್ರದೇಶದ ಸುಮಾರು 500 ಕ್ಕೂ ಅಧಿಕ ಜನರಿಗೆ ಪ್ರತಿನಿತ್ಯ ಮಧ್ಯಾಹ್ನದ ಊಟ ಮತ್ತು ಅರ್ಧ ಲೀಟರ್‌ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಇನ್ನುಳಿದಂತೆ ಖಾಸಗಿ ಮತ್ತು ಸರಕಾರಿ ಬಸ್‌ ನಿಲ್ದಾಣದಲ್ಲಿ ಸಿಗುವ ಕಾರ್ಮಿಕರಿಗೆ ಊಟದ ವ್ಯವಸ್ಥೆ ದೊರೆಯುತ್ತಿದೆ.
ಡಾ.ಜಿ.ಪರಮೇಶ್ವರ ಗೆಳೆಯರ ಬಳಗ ಮತ್ತು ಎಂ ಎನ್ ಜೆ ಅಭಿಮಾನಿ ಬಳಗದ ಸುಮಾರು 80 ಕ್ಕೂ ಅಧಿಕ ಜನ ಯುವಕರ ಪಡೆಯು ನಿಸ್ವಾರ್ಥವಾಗಿ ಎಂ ಎನ್ ಜೆ ಮಂಜುನಾಥ ಜೊತೆಗೂಡಿ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಕೊರಟಗೆರೆ ಪಟ್ಟಣದ ಹೊರವಲಯದ ಖಾಸಗಿ ಮನೆಯೊಂದರಲ್ಲಿ ಪ್ರತಿನಿತ್ಯ ಊಟ ತಯಾರಿಸಿ ಮಧ್ಯಾಹ್ನ 1 ಗಂಟೆಯೊಳಗೆ ಜನರಿಗೆ ತಲುಪಿಸುತ್ತಾರೆ. ಪ್ರಸ್ತುತ ಸಮಾಜದ ಮಾನವೀಯ ಮೌಲ್ಯಗಳಿಗೆ ಇವರ ನಿಸ್ವಾರ್ಥ ಕೆಲಸವು ಮತ್ತಷ್ಟು ಶಕ್ತಿ ನೀಡುವಂತಿದೆ.
ಕೊರೊನಾ ರೋಗದ ಭಯದಿಂದ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ರಾಜಕೀಯ ವರ್ಗವೇ ಮೌನಕ್ಕೆ ಶರಣಾಗಿ ಸ್ವತಃ ಮನೆಬಿಟ್ಟು ಹೊರಗಡೆ ಬರುವ ಪ್ರಯತ್ನ ಮಾಡುತ್ತಿಲ್ಲ, ಆದರೆ ಎಂ ಎನ್.ಜೆ ಮಂಜುನಾಥ ಮಾಡುತ್ತಿರುವ ಸಮಾಜಸೇವೆಗೆ ಸಾಮಾಜಿಕ ಜಾಲತಾಣ ಸೇರಿದಂತೆ ನಾಗರಿಕ ಸಮಾಜದಿಂದ ಪ್ರಶಂಸೆ ವ್ಯಕ್ತವಾಗಿದೆ. ಇವರ ನಿಸ್ವಾರ್ಥ ಸಮಾಜ ಸೇವೆಯು ರಾಜಕೀಯ ನಾಯಕರಿಗೆ ಮಾರ್ಗದರ್ಶನ ನೀಡುವಂತಿದೆ.

ರೈತರಿಂದ ನೇರ ತರಕಾರಿ ಖರೀದಿ..
ಕೊರೊನಾ ರೋಗದ ಜನತಾ ಕರ್ಪ್ಯೂನಿಂದ ರೈತರು ಬೆಳೆದಿರುವ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ, ಕೊರಟಗೆರೆ ಸಂತೆ, ಅಕ್ಕಿರಾಂಪುರ ಸಂತೆಯನ್ನು ನಿಷೇಧ ಮಾಡಲಾಗಿದೆ. ರೈತರಿಂದ ಮಾಹಿತಿ ಪಡೆದ ಮಂಜುನಾಥ ರೈತರಿಂದಲೇ ತರಕಾರಿ ಖರೀದಿ ಮಧ್ಯಾಹ್ನ ಊಟ ತಯಾರಿಸಲು ಮುಂದಾಗಿದ್ದಾರೆ, ರೈತರು ಬೆಳೆದಿರುವ ಜಮೀನಿಗೆ ತೆರಳಿ ಅಲ್ಲಿಂದಲೇ ತರಕಾರಿ ಖರೀದಿಸಿ ರೈತರಿಗೆ ಉತ್ತೇಜನ ನೀಡುವ ಪ್ರಯತ್ನ ಮಾಡಿದ್ದಾರೆ.

ಎಂ ಎನ್ ಜೆ ಗ್ರೂಪ್‌ನಿಂದ ಅನನ್ಯ ಸೇವೆ..
ಮಹಿಳೆಯರಿಗಾಗಿ 2020ರಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ, 2021ರಲ್ಲಿ ಯುವಕರ ಕ್ರೀಡಾ ಸ್ಪೂರ್ತಿಯಾಗಿ ಎಂ ಎನ್ ಜೆ ಕ್ರಿಕೆಟ್‌ ಕಪ್‌, ಕೊರೊನಾ ಸೈನಿಕರಾಗಿ ಸೇವೆ ಸಲ್ಲಿಸಿದ ವೈದ್ಯಕೀಯ ತಂಡ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೊಲೀಸ್‌, ಗ್ರಾಪಂ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಸನ್ಮಾನ, ಜನರ ಆರೋಗ್ಯ ರಕ್ಷಣೆಗಾಗಿ 60 ಸಾವಿರಕ್ಕೂ ಅಧಿಕ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಣೆ, ಬಡಜನರಿಗೆ 4 ಸಾವಿರಕ್ಕೂ ಅಧಿಕ ಆಹಾರದ ಕಿಟ್‌ ಪೂರೈಕೆ, ಪ್ರಸ್ತುತ ಈಗ ಆಸ್ಪತ್ರೆಗೆ ಆಗಮಿಸುವ ಗ್ರಾಮೀಣ ಜನರಿಗೆ ಉಚಿತ ಮಧ್ಯಾಹ್ನದ ಊಟ ಆಯೋಜನೆ ಮಾಡಲಾಗುತ್ತಿದೆ.

ಡಾ.ಜಿ.ಪರಮೇಶ್ವರ್‌ ಸಲಹೆಯಂತೆ ಕೊರಟಗೆರೆ ಪಟ್ಟಣದಲ್ಲಿ ಉಚಿತ ದಾಸೋಹ ವ್ಯವಸ್ಥೆ ಪ್ರಾರಂಭ ಮಾಡಲಾಗಿದೆ. ಕೊರೊನಾ ಲಾಕ್ ಡೌನ್‌ ಮುಗಿಯುವ ತನಕ ಪ್ರತಿನಿತ್ಯ 500 ಜನಕ್ಕೆ ಉಚಿತ ಊಟ ಮತ್ತು ನೀರಿನ ವ್ಯವಸ್ಥೆ ಇರಲಿದೆ. ಬಡಜನರ ಸೇವೆ ಮಾಡುವ ಅವಕಾಶ ನನಗೆ ದೊರೆತಿರುವುದೇ ಪುಣ್ಯದ ಕೆಲಸ. ಕೊರಟಗೆರೆ ಕ್ಷೇತ್ರದ ಜನರ ಸಮಸ್ಯೆಗೆ ಹಗಲುರಾತ್ರಿ ಜೊತೆಯಾಗಿ ಇರುತ್ತೇನೆ.
-ಎಂ ಎನ್ ಜೆ ಮಂಜುನಾಥ, ಸಮಾಜ ಸೇವಕ, ಕೊರಟಗೆರೆ.

Get real time updates directly on you device, subscribe now.

Comments are closed.

error: Content is protected !!