ತುರುವೇಕೆರೆ: ಕೊರೊನಾ ಸೋಂಕಿತರನ್ನು ಹೋಮ್ ಐಸೋಲೇಸನ್ ನಲ್ಲಿ ಇಡುವುದು ಬೇಡ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ಕೆಲವರು ಹೋಮ್ ಐಸೋಲೇಶನ್ ನಲ್ಲಿ ಇರುವವರು ಹೊರಗಡೆ ಓಡಾಡುತ್ತಿರುವ ಮಾಹಿತಿ ಇದೆ, ಹೋಮ್ ಐಸೋಲೇಶನ್ ನಲ್ಲಿ ಅವರನ್ನು ಉಳಿಸುವುದರಿಂದ ಕೊರೊನಾ ಮತ್ತಷ್ಟ ಜನರಿಗೆ ಹಬ್ಬುವ ಆತಂಕವಿದೆ, ಈ ಹಿನ್ನಲೆಯಲ್ಲಿ ಕೊರೊನಾ ಸೋಂಕು ಧೃಡಪಟ್ಟರೇ ತಕ್ಷಣ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಿ, ಈಗಾಗಲೇ ಹಾಟ್ ಸ್ಪಾಟ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಂದ ಸೋಂಕು ಹಬ್ಬದಂತೆ ಪಿಡಿಓಗಳು ಕಣ್ಗಾವಲಿರಿಸಬೇಕು ಎಂದರು.
ತುರುವೇಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಔಷಧಿ, ಸ್ಟಾಪ್ ನರ್ಸ್ಗಳು ಮತ್ತು ಸಿಬ್ಬಂದಿಯ ಕೊರತೆ ಇದೆ ಎಂಬ ಡಾ.ಸುಪ್ರಿಯಾ ಅವರ ಮನವಿಗೆ ಸಭೆಯಲ್ಲಿದ್ದ ಡಿ ಎಚ್ ಒ ಡಾ.ನಾಗೇಂದ್ರಪ್ಪ ಅವರಿಗೆ ಸಿಬ್ಬಂದಿ ಸಮಸ್ಯೆ ನೀಗಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ತಾಲ್ಲೂಕಿನಲ್ಲಿರುವ ಕೊರೊನಾ ಸೋಂಕಿತರು, ಗುಣಮುಖರಾದವರು, ಹೋಮ್ ಕ್ವಾರಂಟೈನ್ನಲ್ಲಿರುವವರ ಮಾಹಿತಿ ನೀಡಲು ತಹಶೀಲ್ದಾರ್ ನಯೀಮುನ್ನಿಸ್ಸಾ ಮುಂದಾದರು, ನೀವು ನೀಡುತ್ತಿರುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ, ನೀವು ಏನು ಕೆಲಸ ಮಾಡುತ್ತಿದ್ದೀರಿ, ನಿಖರವಾದ ಮಾಹಿತಿ ನೀಡಿ ಎಂದು ಟಿ ಹೆಚ್ ಓ ಹಾಗೂ ತಹಶೀಲ್ದಾರ್ ಗೆ ಎಚ್ಚರಿಕೆ ನೀಡಿದರು.
ಜಿಪಂ ಸಿಇಓ ಮಾತನಾಡಿ ತಾಲೂಕಿನ ವ್ಯಾಪ್ತಿಯಲ್ಲಿರುವ ಹಾಟ್ ಸ್ಪಾಟ್ ಗಳೆಂದು 4 ಪಂಚಾಯಿತಿಗಳನ್ನು ಗುರುತಿಸಲಾಗಿದೆ, ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆಯನ್ನು ಪಿಡಿಓಗಳು ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ ವಹಿಸಬೇಕಿದೆ, ಹೋಂ ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ವಹಿಸಬೇಕಿದೆ, ಹಾಟ್ ಸ್ಪಾಟ್ ಗಳಲ್ಲಿ ಸೋಂಕು ಹೆಚ್ಚಳವಾದರೆ ಅಧಿಕಾರಿಗಳೆ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಡಿ ಎಚ್ ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್, ತಿಪಟೂರು ಉಪ ವಿಭಾಗಾಧಿಕಾರಿ ದಿಗ್ವಿಯ್ ಬೋಡ್ಕೆ, ತಹಶೀಲ್ದಾರ್ ಆರ್.ನಯಿಂಉನ್ನೀಸಾ, ಇಓ ಜಯಕುಮಾರ್, ಡಾ.ಶ್ರೀಧರ್, ಡಾ.ಸುಪ್ರಿಯಾ ಇನ್ನಿತರ ಅಧಿಕಾರಿಗಳು ಇದ್ದರು.
ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಿ: ಮಾಧುಸ್ವಾಮಿ
Get real time updates directly on you device, subscribe now.
Prev Post
Next Post
Comments are closed.